ಕರಾಚಿ(ಪಾಕಿಸ್ತಾನ): ದೇಶದ ಒಟ್ಟಾರೆ ಬೆಳವಣಿಗೆಯಲ್ಲಿ ತೀರಾ ಹಿಂದುಳಿದಿರುವ ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎನ್ನುವ ವಿಚಾರ ಬಹಿರಂಗವಾಗಿದೆ.
2019ರ ಜನವರಿಯಿಂದ ಜೂನ್ ಅವಧಿಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಭಾಗದಲ್ಲಿ ಮರ್ಯಾದಾ ಹತ್ಯೆಗೆ 70ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ವರದಿಯೊಂದು ಹೇಳಿದೆ. ಪಾಕಿಸ್ತಾನದಲ್ಲಿ ಇದನ್ನು ಕರೋ-ಕರಿ(Karo-Kari) ಹತ್ಯೆ ಎಂದು ಕರೆಯುತ್ತಾರೆ.
ಜಗತ್ತೇ ಕಾಶ್ಮೀರದ ಕೈ ಬಿಟ್ಟರೂ ಪಾಕ್ ಬಿಡುವುದಿಲ್ಲ: ಇಮ್ರಾನ್ ಖಾನ್
ಆದರೆ, ಈ ಮರ್ಯಾದಾ ಹತ್ಯೆಯಲ್ಲಿ ಶೇ.90ರಷ್ಟು ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲೇ ಇವೆ. ಪೊಲೀಸರು ತನಿಖೆ ಬಹುತೇಕ ಸೂಕ್ತ ರೀತಿಯಲ್ಲಿ ಇತ್ಯರ್ಥವಾಗಿಲ್ಲ ಎಂದು ಪಾಕ್ ಮಾಧ್ಯಮದಲ್ಲಿ ವರದಿಯಾಗಿದೆ.
ಸಿಂಧ್ ಪ್ರಾಂತ್ಯದ ಐಜಿ ಕಲೀಮ್ ಇಮಾಮ್ ಸಿಂಧ್ ಪ್ರಾಂತ್ಯದಲ್ಲಿ ಈ ವರ್ಷ ನಡೆದ ಎಲ್ಲ ಮರ್ಯಾದಾ ಹತ್ಯೆಯ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ಇದಲ್ಲದೇ ಬಾಕಿ ಇರುವ ಪ್ರಕರಣದ ನ್ಯೂನ್ಯತೆಯನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.