ಬೀಜಿಂಗ್(ಚೀನಾ): ವಾಯವ್ಯ ಪಾಕಿಸ್ತಾನದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಪ್ರಧಾನ ಸಂಪಾದಕ ಹು ಕ್ಸಿಜಿನ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
-
The cowardly terrorists behind this attack dare not show up until now. But they will definitely be found out and must be exterminated. If Pakistan’s capability is not enough, with its consent, China’s missiles and special forces can be put into action. https://t.co/6Y6caJWGr3
— Hu Xijin 胡锡进 (@HuXijin_GT) July 16, 2021 " class="align-text-top noRightClick twitterSection" data="
">The cowardly terrorists behind this attack dare not show up until now. But they will definitely be found out and must be exterminated. If Pakistan’s capability is not enough, with its consent, China’s missiles and special forces can be put into action. https://t.co/6Y6caJWGr3
— Hu Xijin 胡锡进 (@HuXijin_GT) July 16, 2021The cowardly terrorists behind this attack dare not show up until now. But they will definitely be found out and must be exterminated. If Pakistan’s capability is not enough, with its consent, China’s missiles and special forces can be put into action. https://t.co/6Y6caJWGr3
— Hu Xijin 胡锡进 (@HuXijin_GT) July 16, 2021
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಯೋತ್ಪಾದಕರನ್ನು ತೊಡೆದುಹಾಕಲು ಪಾಕಿಸ್ತಾನಕ್ಕೆ ಸಾಧ್ಯವಾಗದಿದ್ದರೆ, ಚೀನಾದ ಕ್ಷಿಪಣಿಗಳು ಮತ್ತು ಸೇನೆಯನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕಾಗಬಹುದು ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಈ ದಾಳಿಯ ಹಿಂದಿನ ಭಯೋತ್ಪಾದಕರು ಖಂಡಿತವಾಗಿಯೂ ಪತ್ತೆಯಾಗುತ್ತಾರೆ ಮತ್ತು ಅವರನ್ನು ನಿರ್ನಾಮ ಮಾಡಬೇಕು. ಪಾಕಿಸ್ತಾನಕ್ಕೆ ಸಾಮರ್ಥ್ಯವಿಲ್ಲದಿದ್ದರೆ, ಪಾಕ್ನ ಒಪ್ಪಿಗೆಯೊಂದಿಗೆ ಚೀನಾದ ಕ್ಷಿಪಣಿಗಳು ಮತ್ತು ವಿಶೇಷ ಪಡೆಗಳನ್ನು ಭಯೋತ್ಪಾದನೆ ನಿಗ್ರಹಕ್ಕೆ ಕಾರ್ಯರೂಪಕ್ಕೆ ತರಬಹುದು ಎಂದಿದ್ದಾರೆ.
ಜುಲೈ 14ರಂದು ಬಸ್ನಲ್ಲಿ ಭೀಕರ ಸ್ಫೋಟವೊಂದು ಸಂಭವಿಸಿ, ಚೀನಾದ 9 ಪ್ರಜೆಗಳೂ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದ ಘಟನೆ ಈಶಾನ್ಯ ಪಾಕಿಸ್ತಾನದಲ್ಲಿ ನಡೆದಿತ್ತು. ದಸು ಜಲವಿದ್ಯುತ್ ಯೋಜನೆಯ ಡ್ಯಾಮ್ಗಾಗಿ ಕಾರ್ಯನಿರ್ವಹಿಸುತ್ತಿದ್ದ ತೆರಳುತ್ತಿದ್ದ ಚೀನಾದ ಇಂಜಿನಿಯರ್ಗಳು, ಸರ್ವೇಯರ್ಗಳು ಸ್ಫೋಟದಲ್ಲಿ ಸಾವನ್ನಪ್ಪಿದ್ದರು.