ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹಿಂದೂಗಳಿಗೆ ಹೋಳಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಹೋಳಿ ಹಬ್ಬವನ್ನು ಪಾಕಿಸ್ತಾನದಲ್ಲಿ ಭಾನುವಾರ ಮತ್ತು ಸೋಮವಾರ ಆಚರಿಸಲಾಗುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, "ಹಿಂದೂ ಸಮುದಾಯದ ಎಲ್ಲ ಬಾಂಧವರಿಗೆ ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು" ಎಂದು ಹೇಳಿದ್ದಾರೆ.
-
Wishing all our Hindu community a very happy Holi, the festival of colours.
— Imran Khan (@ImranKhanPTI) March 28, 2021 " class="align-text-top noRightClick twitterSection" data="
">Wishing all our Hindu community a very happy Holi, the festival of colours.
— Imran Khan (@ImranKhanPTI) March 28, 2021Wishing all our Hindu community a very happy Holi, the festival of colours.
— Imran Khan (@ImranKhanPTI) March 28, 2021
ಪಾಕ್ ಸಂಸತ್ ಸ್ಪೀಕರ್ ಅಸಾದ್ ಖೈಸರ್ ಸೇರಿದಂತೆ ಹಲವು ನಾಯಕರು ಹಿಂದೂ ಸಂಸದರಿಗೆ ಮತ್ತು ಹಿಂದೂ ಸಮುದಾಯಕ್ಕೆ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಧಾರ್ಮಿಕ ಹಬ್ಬಗಳನ್ನು ಬಹಿರಂಗವಾಗಿ ಆಚರಿಸುವ ಹಕ್ಕು ಹೊಂದಿವೆ ಎಂದು ಸ್ಪೀಕರ್ ಖೈಸರ್ ಹೇಳಿದ್ದಾರೆ.
ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಅಧಿಕೃತ ಅಂಕಿ-ಅಂಶಗಳ ಪ್ರಕಾರ 75 ಲಕ್ಷ ಹಿಂದೂಗಳು ನೆಲೆಸಿದ್ದಾರೆ.