ETV Bharat / international

2020ರ ಒಲಿಂಪಿಕ್​ ಮೇಲೆ ಕೊರೊನಾ ಕರಿನೆರಳು... ಕ್ರೀಡಾಕೂಟ ಮುಂದೂಡಿಕೆ ಮಾಡಿ ಮಹತ್ವದ ನಿರ್ಧಾರ - ಟೋಕಿಯೋ ಒಲಂಪಿಕ್​

ಬರುವ ಜುಲೈ 24 ರಿಂದ ಆಗಸ್ಟ್​ 9ರವರೆಗೆ ನಡೆಬೇಕಾಗಿದ್ದ 2020ರ ಟೋಕಿಯೋ ಒಲಿಂಪಿಕ್​ ಇದೀಗ ಮುಂದೂಡಿಕೆಯಾಗಿದ್ದು, ಒಲಿಂಪಿಕ್​ ಐತಿಹಾಸದಲ್ಲೇ ಮೊದಲ ಸಲ ಈ ನಿರ್ಧಾರ ಕೈಗೊಂಡು ಮಹತ್ವದ ಆದೇಶ ಹೊರಹಾಕಲಾಗಿದೆ.

Olympics Postponed To 2021 Due To Coronavirus

author img

By

Published : Mar 24, 2020, 7:00 PM IST

ಟೋಕಿಯೋ: ಮಹಾಮಾರಿ ಕೊರೊನಾ ವೈರಾಣು ಸೋಂಕು ಇದೀಗ ವಿಶ್ವದ ಪ್ರತಿಷ್ಠಿತ ಕ್ರೀಡಾಕೂಟದ ಮೇಲೂ ಬಿದ್ದಿದ್ದು, ಜಪಾನ್​ನಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್​ ಮುಂದೂಡಿಕೆಯಾಗಿ ಆದೇಶ ಹೊರಬಿದ್ದಿದೆ. ಇದೇ ವರ್ಷ ನಡೆಯಬೇಕಾಗಿದ್ದ ಐತಿಹಾಸಿಕ ಒಲಿಂಪಿಕ್​ ಮುಂದಿನ ವರ್ಷ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ಜಪಾನ್​ ಪ್ರಧಾನಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಡೀ ವಿಶ್ವವೇ ಕೊರೊನಾ ಸೋಂಕಿನಿಂದ ತತ್ತರಿಸುತ್ತಿದ್ದು, ಟೋಕಿಯೋ 2020 ಒಲಿಂಪಿಕ್ ಕ್ರೀಡಾಕೂಟ ಮುಂದೂಡಿಕೆ ಮಾಡುವಂತೆ ಅನೇಕ ರಾಷ್ಟ್ರಗಳು ಮನವಿ ಮಾಡಿದ್ದವು. ಜತೆಗೆ ಭಾರತ, ಕೆನಡಾ, ನಾರ್ವೆ ಸೇರಿದಂತೆ ಅನೇಕ ದೇಶಗಳು ತನ್ನ ಕ್ರೀಡಾಪಟುಗಳನ್ನ ಈ ಕ್ರೀಡಾಕೂಟಕ್ಕೆ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದವು.

ಅತಿಥ್ಯ ವಹಿಸಿರುವ ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಮಾತನಾಡಿದ್ದು, ವಿವಿಧ ದೇಶಗಳ ಅಥ್ಲೀಟ್​​​​ಗಳು ಮತ್ತು ಕ್ರೀಡಾ ಸಂಸ್ಥೆಗಳು ವ್ಯಾಪಕ ಒತ್ತಡ ಹೇರುತ್ತಿರುವುದರಿಂದ ಒಲಿಂಪಿಕ್ ಆಯೋಜನೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ.

ಟೋಕಿಯೋ-2020ರ ಗೇಮ್ಸ್​ ನಿಗದಿಯಾಗಿರುವಂತೆ ಜುಲೈ 24ರಿಂದ ಆರಂಭವಾಗಬೇಕಾಗಿತ್ತು. ಆದರೆ ರಕ್ಕಸ ಕೊರೊನಾ ತನ್ನ ವ್ಯಾಪಕತೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.