ಸಿಯೋಲ್: ಉತ್ತರ ಕೊರಿಯಾ ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಮುದ್ರದ ಮೇಲೆ ಹಾರಿಸುವ ಮೂಲಕ ಮತ್ತೆ ಪರೀಕ್ಷಾರ್ಥ ಪ್ರಯೋಗ ನಡೆಸಿದೆ ಎಂದು ಅದರ ನೆರೆಹೊರೆ ರಾಷ್ಟ್ರಗಳ ಸೇನೆಗಳು ಮಾಹಿತಿ ನೀಡಿವೆ. ಅಮೆರಿಕದೊಂದಿಗಿನ ದೀರ್ಘಕಾಲದ ಪರಮಾಣು ಮಾತುಕತೆಗಳು ಸ್ಥಗಿತದ ಮಧ್ಯೆ ಈ ವರ್ಷ ತನ್ನ ಶಸ್ತ್ರಾಸ್ತ್ರ ಪರೀಕ್ಷೆಗಳ ಸರಣಿಯನ್ನು ಉತ್ತರ ಕೊರಿಯಾ ಮುಂದುವರಿಸಿದೆ.
ದಕ್ಷಿಣ ಕೊರಿಯಾದ ಸೇನಾ ಜಂಟಿ ಮುಖ್ಯಸ್ಥ ಈ ಬಗ್ಗೆ ಮಾಹಿತಿ ನೀಡಿದ್ದು, ಇಂದು ಬ್ಯಾಲಿಸ್ಟಿಕ್ ಕ್ಷಿಪಣಿ(ಗುರುತ್ವಾಕರ್ಷಣ ಶಕ್ತಿಯಿಂದಲೇ ಚಲಿಸುವ ಕ್ಷಿಪಣಿ)ಯನ್ನು ದೇಶದ ಪೂರ್ವ ಸಮುದ್ರದ ಕಡೆಗೆ ಹಾರಿಸಲಾಯಿತು ಎಂದು ಹೇಳಿದ್ದಾರೆ. ಆದರೆ ಅದು ಎಷ್ಟು ದೂರ ಹಾರಿತು ಎಂದು ತಕ್ಷಣವೇ ತಿಳಿಯಲಿಲ್ಲ ಎಂದಿದ್ದಾರೆ.
ಬಹುಶಃ ಕ್ಷಿಪಣಿ ಬ್ಯಾಲಿಸ್ಟಿಕ್ ಆಗಿರಬಹುದು ಎಂದು ಜಪಾನ್ ರಕ್ಷಣಾ ಸಚಿವಾಲಯ ಹೇಳಿದೆ. ಇದು 2022 ರಲ್ಲಿ ಉತ್ತರ ಕೊರಿಯಾದ ಒಂಬತ್ತನೇ ಸುತ್ತಿನ ಶಸ್ತ್ರಾಸ್ತ್ರಗಳ ಉಡಾವಣೆಯಾಗಿದೆ. ಉತ್ತರ ಕೊರಿಯಾ ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಅಂತ್ಯಗೊಳಿಸುವ ಸಂಬಂಧ ಅಮೆರಿಕ ಜೊತೆಗಿನ ಪರಮಾಣು ನಿಶ್ಯಸ್ತ್ರೀಕರಣ ಮಾತುಕತೆಗಳು 2019 ರಿಂದ ಸ್ಥಗಿತವಾಗಿವೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಮೆರಿಕ ಡಬಲ್ ಗೇಮ್.. ಉತ್ತರ ಕೊರಿಯಾ ಹೀಗಂತು..