ಬೀಜಿಂಗ್: ಚೀನಾದಲ್ಲಿ ಪತನಗೊಂಡ ವಿಮಾನದಲ್ಲಿದ್ದ 132 ಜನರಲ್ಲಿ ವಿದೇಶಿಗರು ಇರಲಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕುನ್‌ಮಿಂಗ್‌ನಿಂದ ಗುವಾಂಗ್‌ಝೌಗೆ ಹಾರಿದ ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನವು ವುಝೌ ನಗರದ ಟೆಂಗ್‌ಕ್ಸಿಯಾನ್ ಕೌಂಟಿಯಲ್ಲಿ ಪತನಗೊಂಡಿದೆ. ವಿಮಾನ ಬಿದ್ದ ರಭಸಕ್ಕೆ ಬೆಂಕಿಯ ಜ್ವಾಲೆಯೇ ಎದ್ದಿದೆ. ವಿಮಾನದಲ್ಲಿ ವಿದೇಶಿ ಪ್ರಜೆಗಳು ಇರಲಿಲ್ಲ. ಎಲ್ಲರೂ ಚೀನಾದವರೇ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ಹೇಳಿವೆ.
ಇದಲ್ಲದೇ, ಅಪಘಾತಕ್ಕೀಡಾದ ಬೋಯಿಂಗ್ 737 ವಿಮಾನದಲ್ಲಿ ಯಾವುದೇ ವಿದೇಶಿ ಪ್ರಯಾಣಿಕರು ಇರಲಿಲ್ಲ ಎಂದು ಚೀನಾ ಮೀಡಿಯಾ ಗ್ರೂಪ್ ಈಸ್ಟರ್ನ್ ಏರ್‌ಲೈನ್ಸ್‌ನಿಂದ ಅಧಿಕೃತ ಮಾಹಿತಿ ಪಡೆದಿದೆ ಎಂದು ಸರ್ಕಾರಿ ಸ್ವಾಮ್ಯದ ಸಿಜಿಟಿಎನ್ ಟಿವಿ ವರದಿ ಬಿತ್ತರಿಸಿದೆ.
ಪತನಗೊಂಡ ವಿಮಾನದಲ್ಲಿದ್ದ 132 ಜನರಲ್ಲಿ 123 ಪ್ರಯಾಣಿಕರು ಮತ್ತು 9 ಸಿಬ್ಬಂದಿ ಇದ್ದರು ಎಂದು ಚೀನಾದ ನಾಗರಿಕ ವಿಮಾನಯಾನ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಓದಿ: ಸರ್ಕಾರಿ ವೆಚ್ಚದಲ್ಲಿ ಉಕ್ರೇನ್ನಿಂದ 22,500 ಭಾರತೀಯರ ರಕ್ಷಣೆ: ಕೇಂದ್ರ ಸರ್ಕಾರ