ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಭಯಭೀತರಾದ ಜನರು ಬೇರೆ ದೇಶಗಳಿಗೆ ಪಲಾಯನ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳನ್ನು ಕಾಪಾಡಲು ಹೆತ್ತವರು ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ ಎಂಬುದು ಕೆಲ ವಿಡಿಯೋಗಳಿಂದ ಸ್ಪಷ್ಟವಾಗಿದೆ.
ಒಬ್ಬ ತಾಯಿ ತನ್ನ ಕಂದಮ್ಮನನ್ನು ತಾಲಿಬಾನ್ ರಾಕ್ಷಸರ ಕೈಯಿಂದ ಕಾಪಾಡಲು ಅಮೆರಿಕಾದ ಸೈನಿಕರಿಗೆ ನೀಡುತ್ತಿರುವ ದೃಶ್ಯ ಎಂಥವರ ಮನಸ್ಸು ಕರಗುವಂತೆ ಮಾಡುತ್ತದೆ. ವಿಮಾನ ನಿಲ್ದಾಣದ ತಡೆಗೋಡೆಯ ಮೇಲೇರಿದ ಅಮೆರಿಕಾ ಸೇನಾ ಪಡೆಯ ಸೈನಿಕ ಮಗುವನ್ನು ತಾಯಿಯಿಂದ ಪಡೆದುಕೊಳ್ಳುವ ದೃಶ್ಯ ಮೊಬೈಲ್ ಕ್ಯಾಮರಾದದಲ್ಲಿ ಸೆರೆಯಾಗಿದೆ.
-
US pulled out troops
— Richard Engel (@RichardEngel) August 20, 2021 " class="align-text-top noRightClick twitterSection" data="
Taliban takes over
US has to put in MORE troops than in Afghanistan before to evacuate citizens and allies, while pleading with Taliban to allow safe passage, which theyre not providing https://t.co/wAx76PvD2O
">US pulled out troops
— Richard Engel (@RichardEngel) August 20, 2021
Taliban takes over
US has to put in MORE troops than in Afghanistan before to evacuate citizens and allies, while pleading with Taliban to allow safe passage, which theyre not providing https://t.co/wAx76PvD2OUS pulled out troops
— Richard Engel (@RichardEngel) August 20, 2021
Taliban takes over
US has to put in MORE troops than in Afghanistan before to evacuate citizens and allies, while pleading with Taliban to allow safe passage, which theyre not providing https://t.co/wAx76PvD2O
ಇನ್ನೊಂದು ದೃಶ್ಯದಲ್ಲೂ ಸಹ ಪೋಷಕರು ಗೋಡೆಯ ಮೇಲಿಂದ ಅಮೆರಿಕದ ಸೈನಿಕನಿಗೆ ಮಗುವನ್ನು ಒಪ್ಪಿಸುತ್ತಿದ್ದಾರೆ. ಅಮೆರಿಕ ಸೇನೆಯು ಅಫ್ಘನ್ ನಾಗರಿಕರ ಸಹಾಯಕ್ಕೆ ಧಾವಿಸಿದೆಯಾದರೂ ಅಲ್ಲಿನ ಪರಿಸ್ಥಿತಿ ಅರಿತುಕೊಂಡು ಕಾರ್ಯಾಚರಣೆ ನಡೆಸುತ್ತಿದೆ.
-
The horror at Kabul airport continues - gut-wrenching scenes of a toddler being passed through the crowd to an American soldier behind a wall #Afghanistan pic.twitter.com/jsLXGWdYUN
— Yalda Hakim (@BBCYaldaHakim) August 19, 2021 " class="align-text-top noRightClick twitterSection" data="
">The horror at Kabul airport continues - gut-wrenching scenes of a toddler being passed through the crowd to an American soldier behind a wall #Afghanistan pic.twitter.com/jsLXGWdYUN
— Yalda Hakim (@BBCYaldaHakim) August 19, 2021The horror at Kabul airport continues - gut-wrenching scenes of a toddler being passed through the crowd to an American soldier behind a wall #Afghanistan pic.twitter.com/jsLXGWdYUN
— Yalda Hakim (@BBCYaldaHakim) August 19, 2021
ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡುತ್ತೇವೆ, ಗೌರವಿಸುತ್ತೇವೆ ಎಂದು ಹೇಳಿದ್ದ ತಾಲಿಬಾನಿಗಳು ಇದೀಗ ತಮ್ಮ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಮುಂದೊಂದು ದಿನ ತಮ್ಮ ಮಕ್ಕಳಿಗೂ ಈ ಉಗ್ರರಿಂದ ಸಮಸ್ಯೆಯಾಗಬಹುದು ಅನ್ನುವುದನ್ನು ಅರಿತ ಪೋಷಕರು ಮಕ್ಕಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ.