ಜೆರುಸಲೇಂ: ಕೋವಿಡ್ನಿಂದ ಹೆಚ್ಚು ಆರೋಗ್ಯ ತೊಂದರೆಗೊಳಗಾದ ಜನರಿಗೆ ಇಸ್ರೇಲ್ ನಾಲ್ಕನೇ ಲಸಿಕೆ ಡೋಸ್ ನೀಡಲು ಅನುಮೋದಿಸಿದೆ. ಒಮಿಕ್ರಾನ್ ರೂಪಾಂತರ ಸೋಂಕಿನ ಅಲೆಯನ್ನು ತಡೆಗಟ್ಟುವ ಸಲುವಾಗಿ ಈ ನಿರ್ಣಯ ತೆಗೆದುಕೊಂಡ ಮೊದಲ ದೇಶವಾಗಿದೆ.
ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ನಾಚ್‌ಮನ್ ಆಶ್ ಗುರುವಾರ ತಡರಾತ್ರಿ ಮಾಧ್ಯಮಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದರು. ಈ ನಿರ್ಧಾರವು ಆರಂಭಿಕ ಸಂಶೋಧನೆಯನ್ನು ಆಧರಿಸಿದೆ. ಅಧಿಕಾರಿಗಳು ಪರಿಸ್ಥಿತಿ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ ನಾಲ್ಕನೇ ಡೋಸ್ ನೀಡಬೇಕೆಂದು ಹೇಳಿದರು.
ಇಸ್ರೇಲ್ ಒಂದು ವರ್ಷದ ಹಿಂದೆ ಫೈಜರ್ ಲಸಿಕೆಯ ಬೂಸ್ಟರ್‌ಗಳನ್ನು ಉಚಿತವಾಗಿ ನೀಡಲು ಪ್ರಾರಂಭಿಸಿತು. ಆದರೆ, ದೇಶದಲ್ಲಿ ಡೆಲ್ಟಾ ರೂಪಾಂತರ ಅಲೆಯಿದ್ದು, ವೇಗವಾಗಿ ಹರಡುವ ಒಮಿಕ್ರಾನ್ ಬಗ್ಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇಸ್ರೇಲ್ ಪ್ರಸ್ತುತ 20,000 ಕ್ಕೂ ಹೆಚ್ಚು ಸಕ್ರಿಯ ಕೋವಿಡ್ ರೋಗಿಗಳನ್ನು ಹೊಂದಿದೆ. ಇದರಲ್ಲಿ 94 ಮಂದಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಇಸ್ರೇಲ್‌ನಲ್ಲಿ ಕನಿಷ್ಠ 8,243 ಜನರು ಸಾವನ್ನಪ್ಪಿದ್ದಾರೆ.