ಜೆರುಸಲೆಮ್: ಯುಎಸ್ ಜೊತೆಗೆ ಆ್ಯರೋ-4 ಹೆಸರಿನ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಇಂಟರ್ಸೆಪ್ಟರ್ ಅನ್ನು ಅಭಿವೃದ್ಧಿಪಡಿಸಲು ಇಸ್ರೇಲ್ ಮುಂದಾಗಿದೆ.
ಇಸ್ರೇಲ್ ಕ್ಷಿಪಣಿ ರಕ್ಷಣಾ ಸಂಸ್ಥೆ, ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಯುಎಸ್ ಕ್ಷಿಪಣಿ ರಕ್ಷಣಾ ಸಂಸ್ಥೆ ಆ್ಯರೋ-4 ಕ್ಷಿಪಣಿಯ ಅಭಿವೃದ್ಧಿಯನ್ನು ಆರಂಭಿಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕಾಶ ಹಾಗೂ ಬಾಹ್ಯಾಕಾಶದಲ್ಲೂ ಶತ್ರು ಕ್ಷಿಪಣಿಗಳನ್ನು ತಡೆಯಲು ಆ್ಯರೋ-4 ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಮುಂದಿನ ಪೀಳಿಗೆಯ 3 ಲೇಯರ್ನ ಕ್ಷಿಪಣಿಯಾಗಿರಲಿದೆ ಎಂದು ಸಚಿವಾಲಯ ತಿಳಿಸಿದೆ.
ಯುಎಸ್ ಕ್ಷಿಪಣಿ ರಕ್ಷಣಾ ಏಜೆನ್ಸಿಯ ನಿರ್ದೇಶಕ ಜಾನ್ ಹಿಲ್ ಪ್ರತಿಕ್ರಿಯಿಸಿ, ಉಭಯ ದೇಶಗಳ ನಡುವಿನ ಸಹಕಾರಿ ಕಾರ್ಯಕ್ರಮವು ಇಸ್ರೇಲ್ ಮೇಲಿನ ಶತ್ರು ದೇಶದ ಬೆದರಿಕೆಗಳಿಂದ ರಕ್ಷಿಸಲು ಹಾಗೂ ತನ್ನ ರಾಷ್ಟ್ರೀಯ ಕ್ಷಿಪಣಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಯುಎಸ್ ಬದ್ಧವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮ್ಯಾನ್ಮಾರ್ ಪರಿಸ್ಥಿತಿಯ ಕುರಿತು ವದಂತಿ ನಿರಾಕರಿಸಿದ ಚೀನಾ