ತೈಪೆ (ತೈವಾನ್): ಸಾಂಪ್ರದಾಯಿಕ ಔಷಧದಲ್ಲಿ ಸಹಕಾರ ಹೆಚ್ಚಿಸುವ ದೃಷ್ಟಿಯಿಂದ ಭಾರತವು ತೈವಾನ್‌ನ ನ್ಯಾಷನಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಚೈನೀಸ್ ಮೆಡಿಸಿನ್ (ಎನ್‌ಆರ್‌ಐಸಿಎಂ) ಗೆ 1.5 ಮಿಲಿಯನ್ ರೂ. ದೇಣಿಗೆ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಎನ್‌ಆರ್‌ಐಸಿಎಂ ಬರಲಿದ್ದು, ಭಾರತ ಮೊದಲ ಬಾರಿಗೆ ತೈವಾನ್‌ನ ಸರ್ಕಾರಿ ಸಂಸ್ಥೆಗೆ ಧನಸಹಾಯ ಮಾಡಿದೆ ಎಂದು ತೈವಾನ್ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಗೋಡ್ಸೆ ಆರಾಧಕ ಬಾಬುಲಾಲ್ ಚೌರಾಸಿಯಾ ಸೇರ್ಪಡೆ
2016 ರಲ್ಲಿ ಜಾರಿಗೆ ಬಂದ ತೈವಾನ್‌ನ ನ್ಯೂ ಸೌತ್‌ಬೌಂಡ್ ನೀತಿ ಅನ್ವಯವಾಗುವ ದಕ್ಷಿಣ ಏಷ್ಯಾದ 18 ದೇಶಗಳಲ್ಲಿ ಭಾರತವೂ ಒಂದು. ಭಾರತ ಈಗಾಗಲೇ ಶಾಶ್ವತವಾಗಿ 'ಆಯುಷ್ ಮಾಹಿತಿ ಘಟಕ'ವನ್ನು ಸ್ಥಾಪಿಸಿದ್ದು, ಇದು ದೇಶದ ಸಾಂಪ್ರದಾಯಿಕ ಔಷಧಗಳ ಬಗ್ಗೆ ಮಾಹಿತಿ ನೀಡುತ್ತದೆ. ಅಲ್ಲದೇ ತೈವಾನ್‌ನಲ್ಲಿನ ಚೀನಿ ಔಷಧ ಸಂಸ್ಥೆಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತದೆ.