ಲಾಹೋರ್: ಬಹುನಿರೀಕ್ಷಿತ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಭಾರತ ಮತ್ತು ಪಾಕಿಸ್ತಾನ ಶನಿವಾರ ಚಾಲನೆ ನೀಡಿವೆ. ಈ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಕ್ರಿಕೆಟರ್ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗಾಗಿ ಹುಡುಕಾಟ ನಡೆಸಿದ್ದಾರೆ.
-
Moments before the Indian official jatha arrived for pilgrimage through #KartarpurCorridor...
— Geeta Mohan گیتا موہن गीता मोहन (@Geeta_Mohan) November 9, 2019 " class="align-text-top noRightClick twitterSection" data="
An entire conversation by Pak PM @ImranKhanPTI on "Hamara Sidhu"
Watch.@IndiaToday @MEAIndia @ForeignOfficePk @IndiainPakistan @Ajaybis @DrSJaishankar @capt_amarinder @sherryontopp pic.twitter.com/V1rwYbDVit
">Moments before the Indian official jatha arrived for pilgrimage through #KartarpurCorridor...
— Geeta Mohan گیتا موہن गीता मोहन (@Geeta_Mohan) November 9, 2019
An entire conversation by Pak PM @ImranKhanPTI on "Hamara Sidhu"
Watch.@IndiaToday @MEAIndia @ForeignOfficePk @IndiainPakistan @Ajaybis @DrSJaishankar @capt_amarinder @sherryontopp pic.twitter.com/V1rwYbDVitMoments before the Indian official jatha arrived for pilgrimage through #KartarpurCorridor...
— Geeta Mohan گیتا موہن गीता मोहन (@Geeta_Mohan) November 9, 2019
An entire conversation by Pak PM @ImranKhanPTI on "Hamara Sidhu"
Watch.@IndiaToday @MEAIndia @ForeignOfficePk @IndiainPakistan @Ajaybis @DrSJaishankar @capt_amarinder @sherryontopp pic.twitter.com/V1rwYbDVit
ಬಸ್ವೊಂದರಲ್ಲಿ ಅಧಿಕಾರಿಗಳ ಜೊತೆ ಮಾತನಾಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ನಮ್ಮ ಸಿಧು ಎಲ್ಲಿ? ಅವರು ಕಾರ್ಯಕ್ರಮಕ್ಕೆ ಬಂದಿದ್ದಾರಾ? ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಇಮ್ರಾನ್ ಖಾನ್, ಸಿಧು ಬಗ್ಗೆ ಪ್ರಶ್ನೆ ಮಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಮಹಾರಾಜರ 550ನೇ ಜಯಂತ್ಯುತ್ಸವದ ಅಂಗವಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರ್ತಾರ್ಪುರ ಕಾರಿಡಾರ್ಗೆ ಶನಿವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಈ ಯೋಜನೆಯನ್ನ ಸಾಕಾರಗೊಳಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ಉದ್ಘಾಟನಾ ದಿನವಾದ ನಿನ್ನೆ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್, ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಸೇರಿದಂತೆ 500 ಯಾತ್ರಾರ್ಥಿಗಳ ಮೊದಲ ತಂಡ ಪಾಕಿಸ್ತಾನದ ಕರ್ತಾರ್ಪುರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದೆ.
ಏನಿದು ಕರ್ತಾರ್ಪುರ ಕಾರಿಡಾರ್ ಯೋಜನೆ?
ಸಿಖ್ ಧರ್ಮದ ಸಂಸ್ಥಾಪಕರಾದ ಬಾಬಾ ಗುರುನಾನಕ್ ಅವರು ತಮ್ಮ ಜೀವನದ ಕೊನೆಯ 18 ವರ್ಷವನ್ನು ಈಗಿನ ಪಾಕಿಸ್ತಾನದಲ್ಲಿರುವ ಕರ್ತಾರ್ಪುರದಲ್ಲಿ ಕಳೆದಿದ್ದರು. ಹೀಗಾಗಿ ಕರ್ತಾರ್ಪುರ ಸಿಖ್ ಧರ್ಮದವರಿಗೆ ಪವಿತ್ರ ಸ್ಥಳ. ಭಾರತ ಮತ್ತು ಪಾಕಿಸ್ತಾನ ಗಡಿಯಿಂದ 4 ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೆ ಭಾರತದಲ್ಲಿನ ಸಿಖ್ ಧರ್ಮೀಯರು ವೀಸಾ ರಹಿತವಾಗಿ ಪವಿತ್ರ ಯಾತ್ರೆಗೆ ತೆರಳುವ ಅವಕಾಶ ನೀಡುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ರಾವಿ ನದಿಗೆ ಸೇತುವೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದವು. ಈಗ ಈ ಯೋಜನೆ ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ.