ETV Bharat / international

ಶುಚಿತ್ವದ ವಿಚಾರದಲ್ಲಿ ಎಲ್ಲರಿಗಿಂತಲೂ ಮುಂದೆ ಜಪಾನ್: ಇಲ್ಲಿದೆ ಅಲ್ಲಿನ ಚಿತ್ರಣ..

ಕೊರೊನಾ ವೈರಸ್​ ಬಂದ ಮೇಲೆ ಶುಚಿತ್ವ ಕಾಪಾಡಿಕೊಳ್ಳುವುದು ಎಷ್ಟು ಮಹತ್ವದ್ದು ಎಂಬ ಅರಿವು ಜಗತ್ತಿಗೆ ಆಗತೊಡಗುತ್ತಿದೆ. ಆದರೆ ಜಪಾನ್​ ಜನತೆ ತಮ್ಮ ಜೀವನಶೈಲಿಯಲ್ಲೇ ಸ್ವಚ್ಛತೆ, ಶುಚಿತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಹೀಗಾಗಿಯೇ ಚೀನಾಗೆ ಹತ್ತಿರವಿದ್ದರೂ ಜಪಾನ್​ಗೆ ಕೊರೊನಾ ಅಷ್ಟೊಂದು ಬಾಧಿಸಲಿಲ್ಲ ಎನ್ನಲಾಗಿದೆ.

Hygiene: Japan's High priority
Hygiene: Japan's High priority
author img

By

Published : Apr 4, 2020, 1:45 PM IST

ಹೈದರಾಬಾದ್: ಕೊರೊನಾ ವೈರಸ್​ ಹುಟ್ಟಿದ ಚೀನಾಗೆ ಅತಿ ಹತ್ತಿರದಲ್ಲಿದ್ದರೂ ಜಪಾನ್​ ದೇಶದಲ್ಲಿ ಕೊರೊನಾ ವೈರಸ್​ ಅಷ್ಟೊಂದು ಬಾಧಿಸಿಲ್ಲ. ಜಪಾನಿಗರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವ ಸ್ವಚ್ಛತೆ ಹಾಗೂ ಶುಚಿತ್ವದ ಕ್ರಮಗಳೇ ಇದಕ್ಕೆ ಕಾರಣ. ಶುಚಿತ್ವ ಹಾಗೂ ಸ್ವಚ್ಛತೆಯನ್ನು ಕಾಪಾಡುವುದು ಜಪಾನಿಗರ ಜೀವನಶೈಲಿಯಲ್ಲಿ ಹಾಸುಹೊಕ್ಕಾಗಿದ್ದು, ಅದೊಂದು ಸಂಸ್ಕೃತಿಯಾಗಿಯೂ ಬೆಳೆದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾಸ್ಕ್​ ಧರಿಸಿರುವುದನ್ನು ನಾವು ನೋಡುತ್ತೇವೆ. ಆದರೆ ಮಾಸ್ಕ್​ ಧರಿಸುವುದು ಜಪಾನಿಗರಿಗೆ ಹೊಸದೇನಲ್ಲ. ಚಿಕ್ಕ ನೆಗಡಿ, ಕೆಮ್ಮು ಬಂದರೂ ಸಹ ಅವರು ಮಾಸ್ಕ್​ ಧರಿಸಿಕೊಂಡು ತಿರುಗಾಡುತ್ತಾರೆ. ಮೊದಲ ಸಲ ಜಪಾನಿಗೆ ಹೋದವರು ಮಾಸ್ಕ್​ ಧರಿಸಿದವರನ್ನು ನೋಡಿ ಆಶ್ಚರ್ಯಪಡುತ್ತಿದ್ದರು. ಆದರೆ ಅವರ ಶುಚಿತ್ವದ ಕಾಳಜಿಯ ಅರಿವು ಜಗತ್ತಿಗೆ ಈಗ ತಿಳಿಯತೊಡಗಿದೆ,

ಜಪಾನಿನ ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತೆಯ ಪಾಠವನ್ನೂ ಹೇಳಿ ಕೊಡಲಾಗುತ್ತದೆ. ಕಸ ಗುಡಿಸುವುದು, ಶೌಚಾಲಯ ತೊಳೆಯುವುದು ಮುಂತಾದ ಕೆಲಸಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಲಾಗುತ್ತದೆ. ತರಗತಿಯ ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ವಿಂಗಡಿಸಿ ಎಲ್ಲರಿಗೂ ಒಂದೊಂದು ಕೆಲಸ ಹೇಳಲಾಗುತ್ತದೆ. ತಡ ಮಾಡದೇ ಎಲ್ಲ ತಂಡದ ವಿದ್ಯಾರ್ಥಿಗಳು ಪೊರಕೆ, ಬಕೆಟ್ ಹಿಡಿದುಕೊಂಡು ಶಾಲೆಯ ಆವರಣ ಗುಡಿಸುವುದು, ಶೌಚಾಲಯ ತೊಳೆಯುವುದು ಮುಂತಾದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ.

ಮನೆಯಲ್ಲಿಯೂ ಪಾಲಕರು ಮಕ್ಕಳಿಗೆ ಇದೇ ಅಭ್ಯಾಸ ಕಲಿಸುತ್ತಾರೆ. ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂಬುದನ್ನು ಚಿಕ್ಕವರಿದ್ದಾಗಲೇ ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದ ತಕ್ಷಣ ಶೂ ಬಿಚ್ಚಿ ನಿಗದಿತ ಸ್ಥಳದಲ್ಲಿಟ್ಟ ನಂತರವೇ ಮನೆಯೊಳಗೆ ಹೋಗುತ್ತಾರೆ.

ದೇಶದಲ್ಲಿನ ಬುಲೆಟ್​ ಟ್ರೇನ್​ಗಳನ್ನು ಜನ ಸ್ವಯಂ ಪ್ರೇರಿತವಾಗಿ ಸ್ವಚ್ಛಗೊಳಿಸುತ್ತಾರೆ. ಯಾವುದೇ ಸಭೆ ಸಮಾರಂಭ ನಡೆದರೆ ಯಾರೊಬ್ಬರೂ ಕಸವನ್ನು ಹರಡುವುದಿಲ್ಲ. ಇನ್ನು ಸಿಗರೇಟು ಸೇದುವವರು ತಮ್ಮೊಂದಿಗೆ ಚಿಕ್ಕ ಆ್ಯಷ್​ ಟ್ರೇ ತೆಗೆದುಕೊಂಡು ಹೋಗುತ್ತಾರೆ.

ಯಾವುದಾದರೂ ಸ್ಟೇಡಿಯಂನಲ್ಲಿ ಕ್ರೀಡಾಕೂಟ ಮುಗಿದ ನಂತರ ನೋಡಿದರೆ ಎಲ್ಲೆಲ್ಲೂ ಕಸದ ರಾಶಿ ತುಂಬಿರುತ್ತದೆ. ಆದರೆ ಜಪಾನಿನವರ ವಿಷಯದಲ್ಲಿ ಹೀಗೆ ಹೇಳುವಂತಿಲ್ಲ. ಒಂದು ಉದಾಹರಣೆ ನೋಡುವುದಾದರೆ, 2014 ರಲ್ಲಿ ಬ್ರೆಜಿಲ್​ ಮತ್ತು 2018 ರಲ್ಲಿ ರಷ್ಯಾದಲ್ಲಿ ನಡೆದ ಫುಟ್​ಬಾಲ್​ ಕ್ರೀಡಾಕೂಟ ನಡೆದಿದ್ದವು. ಈ ಮ್ಯಾಚ್​ಗಳು ಮುಗಿದ ನಂತರ ಜಪಾನಿಗರು ತಾವು ಕುಳಿತ ಜಾಗದಲ್ಲಿ ಒಂದೇ ಒಂದು ಕಾಗದದ ಚೂರು ಸಹ ಇರದಂತೆ ಸ್ವಚ್ಛ ಮಾಡಿ ಸ್ಟೇಡಿಯಂನಿಂದ ಹೊರ ಹೋಗಿದ್ದರು ಎಂದರೆ ಸ್ವಚ್ಛತೆಯ ಬಗ್ಗೆ ಜಪಾನಿಗರ ಕಾಳಜಿ ಅರ್ಥ ಮಾಡಿಕೊಳ್ಳಬಹುದು.

ಕೊರೊನಾ ವೈರಸ್​ ಹರಡುತ್ತಿರುವ ಈ ಸಮಯದಲ್ಲಿ ಜಪಾನ್​ನಲ್ಲಿ ಶಾಲೆ-ಕಾಲೇಜುಗಳನ್ನು ಬಂದ್​ ಮಾಡಲಾಗಿದ್ದರೂ, ಹೊಟೇಲ್​ ಹಾಗೂ ರೆಸ್ಟೊರೆಂಟ್​ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಬಹುಶಃ ಶುಚಿತ್ವ ಕಾಪಾಡುವಲ್ಲಿ ತಮ್ಮ ಜನರ ಮೇಲಿರುವ ನಂಬಿಕೆಯಿಂದಲೇ ಹೀಗೆ ಮಾಡಿರಬಹುದು ಅನಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.