ಹಾಂಗ್ ಕಾಂಗ್ : ನಗರದ ಮೊಂಗ್ ಕೋಕ್ ಪ್ರದೇಶದಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆ ನಡೆಸಿದ 200 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ನಿರ್ಧಿಷ್ಟವಾಗಿ ಎಷ್ಟು ಜನರನ್ನು ಬಂಧಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿಲ್ಲ. ಆದರೆ, ಸತತ ಎಚ್ಚರಿಕೆ ನೀಡಿದ ನಂತರ ಮಧ್ಯರಾತ್ರಿ ಬಂಧಿಸಲಾಗಿದೆ ಎಂದು ತಿಳಿಸಿದೆ. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಿದ್ದಾರೆ. ಅಲ್ಲದೆ ಕೆಲ ಪ್ರದೇಶಗಳಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಂಕಾಕ್ ನಗರದದಲ್ಲಿ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ನಡೆದಿದ್ದ ಪ್ರಜಾಪ್ರಭುತ್ವ ಹೋರಾಟ, ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೊಂಚ ತನ್ನಗಾಗಿತ್ತು. ಈಗ ಮತ್ತೆ ಪ್ರತಿಭಟನೆಗಳು ಪ್ರಾರಂಭವಾಗ ತೊಡಗಿದೆ. ಚೀನಾದ ಹಿಡಿತದಲ್ಲಿದ್ದು ಅರೆ ಪ್ರಜಾಪ್ರಭುತ್ವ ಪ್ರಾಂತ್ಯವೆನಿಸಿಕೊಂಡಿರುವ ಹಾಂಕ್ ಕಾಂಗ್ನ್ನು ಸಂಪೂರ್ಣ ಪ್ರಜಾಪ್ರಭುತ್ವಗೊಳಿಸಬೇಕೇಂದು ಜನರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.