ಫ್ರಾನ್ಸ್: ಕಚೇರಿ ವತಿಯಿಂದ ತೆರಳಿದ್ದ ಬ್ಯುಸಿನೆಸ್ ಟ್ರಿಪ್ನಲ್ಲಿ ವ್ಯಕ್ತಿಯೋರ್ವ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ಆತನ ಕುಟುಂಬಕ್ಕೆ ಕಂಪನಿ ಪರಿಹಾರ ಧನ ನೀಡಬೇಕು ಎಂದು ಕೋರ್ಟ್ ಆದೇಶ ಹೊರಡಿಸಿದೆ.
2013ರಲ್ಲಿ ಟಿಎಸ್ಒ ರೈಲ್ವೆ ನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂ ಕ್ಸಿವಿರ್ ಲೋರೆಟ್ ಪ್ರದೇಶಕ್ಕೆ ಕಂಪನಿ ಪರವಾಗಿ ಆಫೀಸ್ ಟ್ರಿಪ್ ಹೋಗಿದ್ದನು. ಈ ವೇಳೆ ಆತ ಮಹಿಳೆಯ ದೈಹಿಕ ಸಂಪರ್ಕ ಬೆಳೆಸಿದ್ದಾಗ ಏಕಾಏಕಿ ಹೃದಯಾಘಾತವಾಗಿ ಸಾವನ್ನಪ್ಪಿದ್ದನು. ಇದೇ ವಿಷಯವನ್ನಿಟ್ಟುಕೊಂಡು ವ್ಯಕ್ತಿಯ ಪೋಷಕರು ಪರಿಹಾರಧನ ನೀಡುವಂತೆ ಕಂಪನಿ ಬಳಿ ಕೇಳಿದ್ದರು. ಆದರೆ ಆತ ದೈಹಿಕ ಸಂಪರ್ಕ ನಡೆಸುತ್ತಿದ್ದ ವೇಳೆ ಸಾವನ್ನಪ್ಪಿದ್ದು ಪರಿಹಾರ ಮನವಿಯನ್ನು ನಿರಾಕರಿಸಿತ್ತು.
ಇದೇ ವಿಷಯವನ್ನಿಟ್ಟುಕೊಂಡು ಆತನ ಕುಟಂಬದವರು ಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿರುವ ಕೋರ್ಟ್ ಕೆಲಸದ ಸ್ಥಳದಲ್ಲೇ ಈ ಘಟನೆ ನಡೆದಿರುವುದರಿಂದ ಆತನಿಗೆ ಹಣ ನೀಡುವಂತೆ ತಿಳಿಸಿದೆ. ಇನ್ನು ಕಂಪನಿ ವಾದದ ಪ್ರಕಾರ, ಆತ ನಾವು ಬುಕ್ ಮಾಡಿಕೊಟ್ಟಿದ್ದ ಹೊಟೇಲ್ನಲ್ಲಿ ಸಾವನ್ನಪ್ಪಿಲ್ಲ. ಬದಲಾಗಿ ನಾವು ಕಳಿಸಿದ್ದ ಕೆಲಸವೇ ಬೇರೆ. ಆತ ಇಂತಹ ಕೆಲಸ ಮಾಡಲು ಹೋಗಿ ಸಾವನ್ನಪ್ಪಿದರೆ ಕಂಪನಿ ಜವಾಬ್ದಾರಿ ಹೊತ್ತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಆದರೆ ಪ್ಯಾರಿಸ್ ಕೋರ್ಟ್ ಪ್ರಕಾರ, ಅದು ಏನೇ ಆಗಲಿ, ವ್ಯಕ್ತಿ ಕಂಪನಿ ಕೆಲಸದ ನಿಮಿತ್ತ ಹೋದ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಹೀಗಾಗಿ ಹಣ ನೀಡಲೇಬೇಕು ಎಂದು ಆದೇಶ ನೀಡಿದೆ. ಜತೆಗೆ ದೈಹಿಕ ಸಂಪರ್ಕ ಮನುಷ್ಯನ ಜೀವನದಲ್ಲಿ ನಡೆಯುವ ಸಹಜ ಕ್ರಿಯೆಯಾಗಿದೆ. ಅದನ್ನು ತಡೆದು ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.