ETV Bharat / international

ಗಡುವಿಗೂ ಮೊದಲೇ ಅಫ್ಘಾನ್‌ನಿಂದ ಏರ್‌ಲಿಫ್ಟ್‌ ಕೆಲಸ ಮುಗಿಸಿದ ದೇಶಗಳು

ಆಗಸ್ಟ್‌ 31 ರೊಳಗೆ ಅಫ್ಘಾನ್‌ನಲ್ಲಿರುವ ಪ್ರಜೆಗಳನ್ನು ತಮ್ಮ ದೇಶಗಳಿಗೆ ಸ್ಥಳಾಂತರಿಸಲು ಅಮೆರಿಕ ಗಡುವು ನೀಡಿತ್ತು. ಈ ಡೆಡ್‌ಲೈನ್‌ಗೂ ಮುನ್ನವೇ ಹಲವು ದೇಶಗಳು ತಮ್ಮವರನ್ನು ಏರ್‌ಲಿಫ್ಟ್‌ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿವೆ.

few countries declared afghan evacuation completed
ಅಮೆರಿಕದ ಡೆಡ್‌ಲೈನ್‌ಗೂ ಮೊದಲೇ ತಮ್ಮವರನ್ನು ಅಫ್ಘಾನ್‌ನಿಂದ ಏರ್‌ಲಿಫ್ಟ್‌ ಮಾಡಿದ ಕೆನಡಾ, ಇತರೆ ದೇಶಗಳು
author img

By

Published : Aug 27, 2021, 1:12 PM IST

ಕಾಬೂಲ್‌: ಅಫ್ಘಾನಿಸ್ತಾನದಿಂದ ತಮ್ಮ ಪ್ರಜೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದೆ ಎಂದು ಕೆನಡಾ ಸರ್ಕಾರ ಘೋಷಿಸಿದೆ. ಅಮೆರಿಕಗಿಂತ ಮುಂಚೆಯೇ ಇತರೆ ದೇಶಗಳು ಕಾಬೂಲ್‌ನಿಂದ ತಮ್ಮ ಜನರನ್ನು ಕರೆದೊಯ್ಯಬೇಕು ಎಂಬ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ದೇಶದ ಜನರನ್ನು ಏರ್‌ಲಿಫ್ಟ್‌ ಮಾಡಲಾಗಿದೆ ಎಂದು ಕೆನಡಾ ಹೇಳಿದೆ.

ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ರಕ್ಷಣಾ ಕಾರ್ಯಕ್ಕೆ ಮೀಸಲಿಡಲಾಗಿದೆ. ಸೇನಾ ವಿಮಾನಗಳ ಮೂಲಕ ಒಟ್ಟು 3,700 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಕೆನಡಾದ ಜನರಲ್ ವೇಯ್ನ್ ಐರೆ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ಅಫ್ಘಾನ್‌ನಿಂದ ಬ್ರಿಟನ್‌ಗೆ ಹೋಗಲು ಅರ್ಹತೆ ಇರುವ ಬಹುತೇಕರನ್ನು ಬ್ರಿಟನ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಿಂದ ತಮ್ಮ ವಾಯುಸೇನೆ ವಿಮಾನಗಳ ಮೂಲಕ 15,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಮಯ ಅತಿ ಕಡಿಮೆ ಇದೆ. ಇನ್ನೂ ಯಾರಾದರೂ ಉಳಿದಿದ್ದರೆ ಅವರನ್ನೂ ಸ್ಥಳಾಂತರಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಅಫ್ಘನ್​ ನೆಲದಲ್ಲಿ ಅಮೆರಿಕ ಸೇನೆ ಅನುಭವಿಸಿದ ಕರಾಳ ದಿನಗಳ ಕಾಲಾನುಕ್ರಮ

ಕಾಬೂಲ್‌ನಿಂದ ತಮ್ಮ ಪ್ರಜೆಗಳನ್ನು ಪಾಕಿಸ್ತಾನಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಬೆಲ್ಜಿಯಂ ಕೂಡ ಘೋಷಿಸಿದೆ. ಶೀಘ್ರದಲ್ಲೇ ಪಾಕ್‌ನಿಂದ ತಮ್ಮವರನ್ನು ದೇಶಕ್ಕೆ ಕರೆದೊಯ್ಯಲಾಗುತ್ತದೆ ಎಂದು ಹೇಳಿದೆ. ಈವರೆಗೆ 1,100 ಜನರನ್ನು ಬೆಲ್ಜಿಯಂಗೆ ಏರ್‌ಲಿಫ್ಟ್‌ ಮಾಡಲಾಗಿದೆ ಎಂದು ಆ ದೇಶದ ಸಚಿವ ಅಲೆಕ್ಸಾಂಡರ್ ಡಿ ಕ್ರೂ ಹೇಳಿದ್ದಾರೆ.

ಪೋಲ್ಯಾಂಡ್‌ನಿಂದಲೂ ಸ್ಥಳಾಂತರ ಪ್ರಕ್ರಿಯೆ ಪೂರ್ಣ

ಪೋಲ್ಯಾಂಡ್‌ ಕೂಡಲ ತಮ್ಮವರನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಿದೆ.

ನಿನ್ನೆ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಉಗ್ರರು ಆತ್ಮಾಹುತಿ ಬಾಂಬ್‌ ದಾಳಿ ನಡೆಸಿ 90ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣರಾಗಿದ್ದಾರೆ. ಘಟನೆಯಿಂದ ಬೇರೆ ಬೇರೆ ದೇಶಗಳಿಗೆ ತೆರಳಲು ಮುಂದಾಗಿರುವವರು ಮತ್ತಷ್ಟು ಭಯಬೀತರಾಗಿದ್ದಾರೆ. ಇದರ ನಡುವೆ, ಎಂತಹದ್ದೇ ಪರಿಸ್ಥಿತಿ ನಿರ್ಮಾಣವಾದರೂ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಿಲ್ಲಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.