ETV Bharat / international

ಶ್ರೀಲಂಕಾದಲ್ಲಿ 2ನೇ ದಾಳಿಗೆ ಸಂಚು ರೂಪಿಸಿದ ಈಸ್ಟರ್ ಸಂಡೇ ಬಾಂಬರ್ಸ್​..!

author img

By

Published : Apr 20, 2020, 6:24 PM IST

ಏಪ್ರಿಲ್ 21, 2019 ರಂದು (ಈಸ್ಟರ್​ ಸಂಡೇ ದಿನ) ಐಸಿಸ್‌ಗೆ ಸಂಬಂಧಿಸಿದ ಆತ್ಮಹತ್ಯಾ ಬಾಂಬರ್‌ಗಳು ಶ್ರೀಲಂಕಾದ ಮೂರು ಚರ್ಚ್​ಗಳು ಮತ್ತು ಅನೇಕ ಐಷಾರಾಮಿ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದರು. ಇದೇ ರೀತಿಯ ಮತ್ತೊಂದು ದಾಳಿಗೆ ಯೋಜನೆ ರೂಪಿಸಲಾಗಿದೆ ಎಂದು ಶ್ರೀಲಂಕಾದ ಅಧಿಕಾರಿ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ 2ನೇ ದಾಳಿಗೆ ಸಂಚು
ಶ್ರೀಲಂಕಾದಲ್ಲಿ 2ನೇ ದಾಳಿಗೆ ಸಂಚು

ಕೊಲಂಬೊ: ಈ ಬಾರಿಯ ಈಸ್ಟರ್ ಸಂಡೇ ದಿನವೂ ಶ್ರೀಲಂಕಾದಲ್ಲಿ ದುಷ್ಕರ್ಮಿಗಳು ಎರಡನೇ ದಾಳಿ ನಡೆಸಲು ಯೋಜಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ವಕ್ತಾರ ಎಸ್‌ಪಿ ಜಲಿಯಾ ಸೇನರತ್ನ ಅವರು ಮಾತನಾಡಿ, ಅಪರಾಧ ತನಿಖಾ ಇಲಾಖೆ (ಸಿಐಡಿ) ನಡೆಸಿದ ತನಿಖೆಯಿಂದಾಗಿ ದುಷ್ಕರ್ಮಿಗಳು ದೇಶದಲ್ಲಿ ಎರಡನೇ ದಾಳಿ ನಡೆಸಲು ಯೋಜಿಸುತ್ತಿದ್ದಾರೆಂಬ ವಿಷಯ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಏಪ್ರಿಲ್ 21, 2019 ರಂದು ನಡೆದ ದಾಳಿಯ ರೀತಿಯೆ ಮತ್ತೊಂದು ಭೀಕರ ದಾಳಿಗೆ ದುಷ್ಕರ್ಮಿಗಳು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.

2019ರ ಈಸ್ಟರ್​ ಸಂಡೇ ದಿನ ನಡೆದಿದ್ದ ದಾಳಿ :

ಏಪ್ರಿಲ್ 21, 2019 ರಂದು (ಈಸ್ಟರ್​ ಸಂಡೇ ದಿನ) ಐಸಿಸ್‌ಗೆ ಸಂಬಂಧಿಸಿರುವ ಸ್ಥಳೀಯ ಇಸ್ಲಾಮಿಸ್ಟ್ ಉಗ್ರಗಾಮಿ ಗುಂಪಿನಲ್ಲಿದ್ದ, ನ್ಯಾಷನಲ್ ತವ್ಹೀದ್ ಜಮಾತ್ (ಎನ್‌ಟಿಜೆ) ಗೆ ಸೇರಿದ ಒಂಬತ್ತು ಆತ್ಮಹತ್ಯಾ ಬಾಂಬರ್‌ಗಳು ಶ್ರೀಲಂಕಾದ ಮೂರು ಚರ್ಚ್​ಗಳು ಮತ್ತು ಅನೇಕ ಐಷಾರಾಮಿ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದರು. 11 ಭಾರತೀಯರು ಸೇರಿದಂತೆ 258 ಜನರು ಸಾವನ್ನಪ್ಪಿದ್ದರು. 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು 200 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.