ETV Bharat / international

ಎಚ್ಚರ... ಕೋವಿಡ್​ ಹೆಸರಲ್ಲಿ ಸೈಬರ್​ ವಂಚನೆಗೊಳಗಾಗಬೇಡಿ ! - ಫಿಶಿಂಗ್

ಜಗತ್ತಿನಲ್ಲಿ ಕೊರೊನಾ ವೈರಸ್​ ಭೀತಿ ಹರಡಿರುವ ಬೆನ್ನಲ್ಲೇ ಅದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವ ಸೈಬರ್​ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ನಕಲಿ ಬ್ರ್ಯಾಂಡ್​ ಮೂಲಕ ವಂಚನೆ, ಖಾಸಗಿ ಮಾಹಿತಿ ಕದಿಯುವಿಕೆ ಹೀಗೆ ಹಲವಾರು ರೀತಿಗಳಲ್ಲಿ ಸೈಬರ್ ಖದೀಮರು ಅಮಾಯಕರಿಗೆ ಗಾಳ ಹಾಕಿ ಕುಳಿತುಕೊಂಡಿದ್ದಾರೆ.

cyber crime
ಸೈಬರ್​ ವಂಚನೆ
author img

By

Published : Mar 27, 2020, 8:35 AM IST

ನ್ಯೂಯಾರ್ಕ್: ಕೋವಿಡ್​-19 ಹೆಸರಲ್ಲಿ ಇಮೇಲ್​ ಮೂಲಕ ವಂಚನೆಯ ಪ್ರಕರಣಗಳು ವಿಪರೀತ ಹೆಚ್ಚಾಗುತ್ತಿವೆ. ಕಳೆದ ಫೆಬ್ರುವರಿ ಅಂತ್ಯಕ್ಕೆ ಕೊರೊನಾ ವೈರಸ್​ ನೆಪದಲ್ಲಿ ನಡೆಸಲಾದ ಇಮೇಲ್​ ದಾಳಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.667 ರಷ್ಟು ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ.

ವಿಶ್ವಾದ್ಯಂತ ಕೋವಿಡ್ ಭೀತಿ ಹರಡಿರುವ ಈ ಸಂದರ್ಭವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಸೈಬರ್ ಖದೀಮರು ಬಳಕೆದಾರರ ಇಮೇಲ್​ಗಳಿಗೆ ಮಾಲ್​ವೇರ್ ಕಳಿಸುತ್ತ ಅವರ ಖಾಸಗಿ ಮಾಹಿತಿಗಳನ್ನು ಭಾರಿ ಪ್ರಮಾಣದಲ್ಲಿ ಕದಿಯುತ್ತಿದ್ದಾರೆ. ಜೊತೆಗೆ ಆಸೆ, ಆಮಿಷಗಳನ್ನೊಡ್ಡುವ ಮೂಲಕ ಜನರಿಂದ ಹಣ ಲಪಟಾಯಿಸುತ್ತಿದ್ದಾರೆ ಎಂದು ಬರ್ರಾಕುಡಾ ನೆಟ್​ವರ್ಕ್ಸ್​ ಸಂಸ್ಥೆ ತಿಳಿಸಿದೆ. ಬರ್ರಾಕುಡಾ ನೆಟ್​ವರ್ಕ್ಸ್​ ಇದು ಕ್ಲೌಡ್​ ಆಧರಿತ ಸೈಬರ್ ಸೆಕ್ಯೂರಿಟಿ ಮತ್ತು ಡೇಟಾ ಸಂರಕ್ಷಣೆ ಸೇವೆ ಒದಗಿಸುವ ಪ್ರಖ್ಯಾತ ಕಂಪನಿಯಾಗಿದೆ.

ಮೊದಲಿನಂತೆ ನಡೆಯುತ್ತಿದ್ದ ಫಿಶಿಂಗ್ ತಂತ್ರಗಳನ್ನೇ ಈಗಲೂ ಬಳಸಲಾಗುತ್ತಿದೆಯಾದರೂ, ಈಗ ಕೊರೊನಾ ವೈರಸ್​ ಹೆಸರಲ್ಲಿ ಸಾಮಾನ್ಯ ಜನರನ್ನು ಹಾಗೂ ಸಂತ್ರಸ್ತರನ್ನು ಸುಲಭವಾಗಿ ಸೈಬರ್ ಖದೀಮರು ತಮ್ಮ ಗಾಳಕ್ಕೆ ಬೀಳಿಸುತ್ತಿದ್ದಾರೆ ಎನ್ನಲಾಗಿದೆ.

ಮಾ.1 ರಿಂದ 23 ರ ಅವಧಿಯಲ್ಲಿ 4,67,825 ಈಮೇಲ್​ ಫಿಶಿಂಗ್​​ ದಾಳಿಗಳು ನಡೆದಿದ್ದು, ಇದರಲ್ಲಿ 9,116 ದಾಳಿಗಳು ಕೋವಿಡ್​ಗೆ ಸಂಬಂಧಿಸಿದವಾಗಿವೆ ಎಂದು ಬರ್ರಾಕುಡಾ ತಂತ್ರಜ್ಞರು ಪತ್ತೆ ಹಚ್ಚಿದ್ದಾರೆ. ಈ ವರ್ಷದ ಜನೇವರಿಯಲ್ಲಿ 137 ಹಾಗೂ ಫೆಬ್ರುವರಿಯಲ್ಲಿ 1,188 ಕೊರೊನಾ ಸಂಬಂಧಿತ ಫಿಶಿಂಗ್​ ದಾಳಿಗಳು ನಡೆದಿವೆ.

ಪ್ರಸ್ತುತ ಬೇರೆಲ್ಲ ರೀತಿಯ ಫಿಶಿಂಗ್​ಗೆ ಹೋಲಿಸಿದಲ್ಲಿ ಕೊರೊನಾ ಸಂಬಂಧಿತ ಫಿಶಿಂಗ್ ಪ್ರಕರಣಗಳು ಕಡಿಮೆ ಇದ್ದರೂ ಬರುವ ದಿನಗಳಲ್ಲಿ ಇದರ ಸಂಖ್ಯೆ ವಿಪರೀತ ಹೆಚ್ಚಾಗುವ ಸಾಧ್ಯತೆಗಳಿವೆ.

ಕೊರೊನಾ ವೈರಸ್​ ಹೆಸರಿನಲ್ಲಿ ವಂಚನೆ, ಬೇರೊಂದು ಕಂಪನಿಯ ಹೆಸರಲ್ಲಿ ಮೋಸ ಮತ್ತು ಕಚೇರಿ ಇಮೇಲ್​ ಹ್ಯಾಕಿಂಗ್​ ಈ ಮೂರು ರೀತಿಯ ಫಿಶಿಂಗ್​ ದಾಳಿಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಾರೆ ಬರ್ರಾಕುಡಾ ತಂತ್ರಜ್ಞರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.