ಬೀಜಿಂಗ್: ಮಹಾಮಾರಿ ಕೊರೊನಾ ವೈರಸ್ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 106 ಕ್ಕೆ ಏರಿದ್ದು, ಹೊಸದಾಗಿ 1300 ಪ್ರಕರಣಗಳು ಪತ್ತೆಯಾಗಿವೆ.
ಚೀನಾದ ಆರೋಗ್ಯಾಧಿಕಾರಿಗಳು ಸೋಮವಾರ 2,744 ಪ್ರಕರಣಗಳನ್ನು ದೃಢಪಡಿಸಿದ್ದು, ಇದರಲ್ಲಿ 461 ಮಂದಿಯ ಸ್ಥಿತಿ ಗಂಭೀರವಾಗಿದೆ. ಅಲ್ಲದೇ ಸುಮಾರು 6,000 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ.
-
#Coronavirus death toll in China rises to 106, nearly 1300 new cases detected, says the government: AFP news agency.
— ANI (@ANI) January 28, 2020 " class="align-text-top noRightClick twitterSection" data="
">#Coronavirus death toll in China rises to 106, nearly 1300 new cases detected, says the government: AFP news agency.
— ANI (@ANI) January 28, 2020#Coronavirus death toll in China rises to 106, nearly 1300 new cases detected, says the government: AFP news agency.
— ANI (@ANI) January 28, 2020
ಶಾಲೆಗಳ ಪುನರಾರಂಭಕ್ಕೆ ವಿಳಂಬ:
ಲುನಾರ್ ಹೊಸ ವರ್ಷದ ಪ್ರಯುಕ್ತ ಚೀನಾದ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ರಜೆ ನೀಡಲಾಗಿತ್ತು. ಸೋಂಕು ಹರಡುವ ಭೀತಿಯಲ್ಲಿ ಚೀನಾದ ಹಲವು ನಗರಗಳಲ್ಲಿ ಸಾರ್ವಜನಿಕ ಹಾಗೂ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಇದೀಗ ಕೊರೊನಾ ವೈರಸ್ ಪ್ರಕರಣ ಗಂಭಿರವಾಗುತ್ತಿದ್ದು, ಶಾಲೆಗಳನ್ನು ಪುನರಾರಂಭಿಸಲು ಚೀನಾ ಸರ್ಕಾರ ವಿಳಂಬ ಮಾಡುತ್ತಿದೆ.
-
#China delays restart of schools, universities over virus concerns: AFP #coronavirus
— ANI (@ANI) January 28, 2020 " class="align-text-top noRightClick twitterSection" data="
">#China delays restart of schools, universities over virus concerns: AFP #coronavirus
— ANI (@ANI) January 28, 2020#China delays restart of schools, universities over virus concerns: AFP #coronavirus
— ANI (@ANI) January 28, 2020
ನೇಪಾಳದಲ್ಲಿ ಕೊರೊನಾ ವೈರಸ್ ಪ್ರಕರಣ ದೃಢಪಟ್ಟ ಬಳಿಕ ನೇಪಾಳದ ಗಡಿಯಲ್ಲಿರುವ ಭಾರತದ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಜಾಗರೂಕತೆ ಹೆಚ್ಚಿಸಿದೆ. ಪಶ್ಚಿಮ ಬಂಗಾಳದ ಪನಿಟಂಕಿ, ಉತ್ತರಾಖಂಡದ ಪಿಥೋರಾಗರ್ ಜಿಲ್ಲೆಯ ಜುಲಘಾಟ್ ಮತ್ತು ಜೌಲ್ಜಿಬಿ ಪ್ರದೇಶದಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಚೀನಾದಿಂದ ಭಾರತಕ್ಕೆ ಬರುತ್ತಿರುವವರನ್ನು ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಚೀನಾದಿಂದ ಬಂದ ಹೈದರಾಬಾದ್, ರಾಜಸ್ಥಾನ, ಬಿಹಾರ್ ಹಾಗೂ ಕೋಲ್ಕತ್ತಾ ಮೂಲದ ವ್ಯಕ್ತಿಗಳಲ್ಲಿ ಶಂಕಿತ ಕೊರೊನಾ ವೈರಸ್ ಕಂಡುಬಂದಿರುವುದು ವರದಿಯಾಗಿದ್ದು, ರೋಗಿಗಳನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿರಿಸಲಾಗಿದೆ. ಆದರೆ ಭಾರತದಲ್ಲಿ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ.