ETV Bharat / international

ಭಾರತವನ್ನು ದುರ್ಬಲಗೊಳಿಸಲು ಚೀನಾ ಮಾಸ್ಟರ್​ ಪ್ಲಾನ್​: ಭಯೋತ್ಪಾದಕ ಸಂಘಟನೆಗೆ ಶಸ್ತ್ರಾಸ್ತ್ರ ಪೂರೈಕೆ - ಭಾರತ-ಮ್ಯಾನ್ಮಾರ್ ಗಡಿ

ಮ್ಯಾನ್ಮಾರ್​ನ ನಾಯ್ಪಿಟಾವ್​ನ ಭಯೋತ್ಪಾದಕ ಸಂಘಟನೆಯಾದ ಅರಾಕನ್ ಸೇನೆಗೆ ಹಣ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಚೀನಾ ಪೂರೈಕೆ ಮಾಡುತ್ತಿದೆ. ಈ ಮೂಲಕ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಅಶಾಂತಿ ಸೃಷ್ಟಿಸಲು ಚೀನಾ ಮುಂದಾಗಿದೆ.

China
ಚೀನಾ ಮಾಸ್ಟರ್​ ಪ್ಲಾನ್
author img

By

Published : Jul 2, 2020, 5:57 PM IST

ನಾಯ್ಪಿಟಾವ್ (ಮ್ಯಾನ್ಮಾರ್‌): ಮ್ಯಾನ್ಮಾರ್ ಮತ್ತು ಭಾರತವನ್ನು ಹತೋಟಿಗೆ ತರಲು ಮುಂದಾಗಿರುವ ಚೀನಾ, ಇದೀಗ ಮ್ಯಾನ್ಮಾರ್​ನ ನಾಯ್ಪಿಟಾವ್​ನ ಭಯೋತ್ಪಾದಕ ಸಂಘಟನೆಯಾದ ಅರಾಕನ್ ಸೇನೆಗೆ ಹಣ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅರಾಕನ್ ಸೇನೆಯು ಸುಮಾರು 50 ಮ್ಯಾನ್‌ಪ್ಯಾಡ್ಸ್ (ಮ್ಯಾನ್-ಪೋರ್ಟಬಲ್ ಏರ್ ಡಿಫೆನ್ಸ್ ಸಿಸ್ಟಮ್ಸ್) ಅಥವಾ ವಾಯು ರಕ್ಷಣಾ ಕ್ಷಿಪಣಿಗಳನ್ನು ಹೊಂದಿದ್ದು, ಈ ಸೇನೆಗೆ ಚೀನಾ ಶೇ. 95 ರಷ್ಟು ಹಣ ಒದಗಿಸುತ್ತಿದೆ. ಈಶಾನ್ಯ ಭಾರತದ ಗಡಿಯಲ್ಲಿ ಅರಾಕನ್ ಸೈನ್ಯ ಕಾರ್ಯ ನಿರ್ವಹಿಸುತ್ತಿರುವುದರಿಂದ ಭಾರತಕ್ಕೆ ಅರಾಕನ್ ಮೂಲಕ ತೊಂದರೆ ಕೊಡಿಸಬಹುದು ಎಂಬುದು ಚೀನಾ ಕುತಂತ್ರವಾಗಿದೆ. ಅಲ್ಲದೇ ಪಶ್ಚಿಮ ಮ್ಯಾನ್ಮಾರ್ ಭಾಗ, ಅಂದರೆ ಭಾರತ-ಮ್ಯಾನ್ಮಾರ್ ಗಡಿಯ ತನ್ನ ಪರಿಧಿ ವಿಸ್ತರಿಸಿಕೊಳ್ಳಬಹುದು ಎಂಬುದು ಚೀನಾದ ದುರಾಲೋಚನೆಯಾಗಿದೆ.

ಮ್ಯಾನ್ಮಾರ್‌ನಲ್ಲಿ ಭಾರತದ ರಸ್ತೆ ನಿರ್ಮಾಣ ಯೋಜನೆ ನಡೆಯುತ್ತಿದ್ದು, ಈ ಹಿಂದೆ ಅರಾಕನ್ ಸೈನ್ಯವು ಭಾರತೀಯ ನಾಗರೀಕರು, ಅಗ್ನಿಶಾಮಕ ದಳದ ಸಿಬ್ಬಂದಿ, ಮ್ಯಾನ್ಮಾರ್ ಸಂಸತ್ತಿನ ಸದಸ್ಯರನ್ನು ಅಪಹರಿಸಿತ್ತು. ವಾಹನ ಮತ್ತು ಕಟ್ಟಡ ಸಾಮಗ್ರಿಗಳನ್ನು ನಾಶ ಮಾಡಿತ್ತು. ಇದೀಗ ಮತ್ತೆ ಅರಾಕನ್ ಸೇನೆಯನ್ನು ಸಶಸ್ತ್ರಗೊಳಿಸಿ ಈ ಯೋಜನೆಗೆ ಅಡ್ಡಿ ಪಡಿಸಲು ಚೀನಾ ಮುಂದಾಗಿದೆ.

ವಾಸ್ತವವಾಗಿ ಭಾರತ ಹಾಗೂ ಮ್ಯಾನ್ಮಾರ್​ ಸಂಬಂಧ ಉತ್ತಮವಾಗಿದೆ. ಚೀನಾದ 59 ಆ್ಯಪ್​ಗಳನ್ನು ಭಾರತ ಬ್ಯಾನ್​ ಮಾಡಿದ ಬಳಿಕ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಚೀನಾ ಯೋಚಿಸುತ್ತಿದೆ. ಹೀಗಾಗಿ ಈ ರಾಷ್ಟ್ರಗಳ ನಡುವೆ ದ್ವೇಷ ಮೂಡಿಸಲು ಚೀನಾ ತಯಾರಿ ನಡೆಸುತ್ತಿದೆ. ಮ್ಯಾನ್ಮಾರ್ ಮತ್ತು ಭಾರತವನ್ನು ದುರ್ಬಲಗೊಳಿಸಲು ಬಯಸಿರುವ ಚೀನಾ ರಾಜತಾಂತ್ರಿಕ - ಭಯೋತ್ಪಾದನೆ ಎರಡೂ ಮಾರ್ಗವನ್ನು ಬಳಸಿ ಏಕಸ್ವಾಮ್ಯ ಸಾಧಿಸಲು ಹೊರಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.