ಬೀಜಿಂಗ್: ಚೀನಾದಲ್ಲಿ ಮಹಾಮಾರಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಒಂದೇ ದಿನಕ್ಕೆ 71 ಜನ ವೈರಸ್ ಸೋಂಕಿತರು ಸಾವಿಗೀಡಾಗಿದ್ದು ಮೃತರ ಸಂಖ್ಯೆ 2,663 ಕ್ಕೆ ಏರಿದೆ.
ರಾಷ್ಟ್ರೀಯ ಆರೋಗ್ಯ ಆಯೋಗದ ವರದಿ ಪ್ರಕಾರ 508 ಹೊಸ ಪ್ರಕರಣಗಳನ್ನ ವರದಿ ಮಾಡಿದೆ. ಚೀನಾದ ಹ್ಯುವಾಯಿ ಪ್ರಾಂತ್ಯದಲ್ಲಿ ಒಂಬತ್ತು ಜನ ವೈರಸ್ ಸೋಂಕಿತರು ಪತ್ತೆಯಾಗಿದ್ದು, ದೇಶಾದ್ಯಂತ 409 ಪ್ರಕರಣಗಳು ಹಚ್ಚಾಗಿವೆ. ಚೀನಾದ ಕೆಲವು ಪ್ರಾಂತ್ಯದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಕರೋನಾ ವೈರಸ್ ಸಾಂಕ್ರಾಮಿಕ ರೋಗವು ಚೀನಾದಲ್ಲಿ "ಉತ್ತುಂಗಕ್ಕೇರಿದೆ" ಎಂದು ಹೇಳಿದೆ.
ಚೀನಾದಲ್ಲಿ ಜನವರಿ 23 ಮತ್ತು ಫೆಬ್ರವರಿ 2ರ ನಡುವೆ ಗರಿಷ್ಠ ಮಟ್ಟದಲ್ಲಿ ಹೊಸ ಪ್ರಕರಣಗಳ ಸಂಖೆ ಅಂದಿನಿಂದ ಕುಸಿತವಾಗಿದೆ ಎಂದು ಡಬ್ಲ್ಯುಎಚ್ಒ ಮುಖ್ಯಸ್ಥರು ಹೇಳಿದ್ದಾರೆ. ಡಬ್ಲ್ಯು ಎಚ್ಒ-ಚೀನಾ ವಿಷನ್ ತಜ್ಞ ಬ್ರೂಸ್ ಐಲ್ವರ್ಡ್ ಇತರ ದೇಶಗಳಿಗೆ ಅತ್ಯಂತ ಅಪಾಯಕಾರಿ ವೇಗದಲ್ಲಿ ಸೋಂಕು ಹರಡುತ್ತಿದೆ ಎಂದು ಎಚ್ಚರಿಸಿದ್ದಾರೆ.