ETV Bharat / international

ಚೀನಾ ಭಾರತಕ್ಕೆ ವ್ಯೂಹಾತ್ಮಕ ಬೆದರಿಕೆಯಾಗಲು ಬಯಸದು; ರಾಯಭಾರಿ ವೀಡಾಂಗ್ - ಚೀನಾ ರಾಯಭಾರಿ ಸನ್ ವೀಡಾಂಗ್

"ಪ್ಯಾಂಗಾಂಗ್​ ಲೇಕ್​ನ ಉತ್ತರ ದಡದಲ್ಲಿ ಚೀನಾದ ನಿಯಂತ್ರಣ ರೇಖೆ ಇದ್ದು, ಇದು ಬಹುಕಾಲದಿಂದ ಇರುವ ವಾಸ್ತವಿಕ ನಿಯಂತ್ರಣ ರೇಖೆಯೇ ಆಗಿದೆ. ಚೀನಾ ತನ್ನ ಭೂಭಾಗವನ್ನು ವಿಸ್ತರಿಸಿಕೊಳ್ಳುತ್ತಿದೆ ಎಂಬ ವಿಷಯ ಸುಳ್ಳು." ಎಂದು ಚೀನಾ ರಾಯಭಾರಿ ಸನ್ ವೀಡಾಂಗ್ ನುಡಿದರು.

Sun Weidong
Sun Weidong
author img

By

Published : Aug 3, 2020, 5:48 PM IST

ನವದೆಹಲಿ: ಗಲ್ವಾನ್ ಸಂಘರ್ಷದಲ್ಲಿ ಎಷ್ಟು ಜನ ಚೀನಾ ಸೈನಿಕರು ಹತರಾಗಿದ್ದಾರೆ ಎಂಬ ಪ್ರಶ್ನೆಗೆ ಚೀನಾ ಈಗಲೂ ಉತ್ತರ ನೀಡುತ್ತಿಲ್ಲ. ದೆಹಲಿಯ ಇನ್​ಸ್ಟಿಟ್ಯೂಟ್​ ಆಫ್​ ಚೈನೀಸ್​ ಸ್ಟಡೀಸ್​ ವತಿಯಿಂದ ನಿನ್ನೆ ಆಯೋಜಿಸಲಾಗಿದ್ದ ವೆಬಿನಾರ್​ನಲ್ಲಿ ಭಾರತದಲ್ಲಿ ಚೀನಾ ರಾಯಭಾರಿ ಸನ್ ವೀಡಾಂಗ್ ಸಹ ಭಾಗವಹಿಸಿದ್ದರು. ಗಲ್ವಾನ್ ಸಂಘರ್ಷದಲ್ಲಿ ಎಷ್ಟು ಜನ ಚೀನಾ ಸೈನಿಕರು ಮೃತಪಟ್ಟಿದ್ದಾರೆ ಹೇಳಿ ಎಂಬ ತೀಕ್ಷ್ಣ ಪ್ರಶ್ನೆಯೊಂದು ವೆಬಿನಾರ್​ನಲ್ಲಿ ಚೀನಾ ರಾಯಭಾರಿಯೆಡೆಗೆ ತೂರಿ ಬಂದಿತ್ತು. ಆದರೆ ರಾಯಭಾರಿ ವೀಡಾಂಗ್​ ಈ ಬಗ್ಗೆ ಏನೊಂದೂ ಪ್ರತಿಕ್ರಿಯಿಸದೆ, ಸುಮ್ಮನೆ ಮೌನಕ್ಕೆ ಶರಣಾದರು.

ತನ್ನ ಕಡೆಯ ಎಷ್ಟು ಸೈನಿಕರು ಸತ್ತರು ಎಂಬುದನ್ನು ಹೇಳಲು ಹಿಂಜರಿದ ಸನ್ ವೀಡಾಂಗ್​, ಗಲ್ವಾನ್ ಸಂಘರ್ಷಕ್ಕೆ ಭಾರತೀಯ ಯೋಧರೇ ಕಾರಣ ಎಂದು ಆರೋಪಿಸಲು ಮಾತ್ರ ಮರೆಯಲಿಲ್ಲ.

"ಗಲ್ವಾನ್ ವ್ಯಾಲಿ ಪ್ರಕರಣದಲ್ಲಿ ಯಾರದು ಸರಿ, ಯಾರದು ತಪ್ಪು ಎಂಬುದು ಸ್ಪಷ್ಟವಾಗಿದೆ. ಇದರಲ್ಲಿ ಚೀನಾದ ತಪ್ಪೇನೂ ಇರಲಿಲ್ಲ. ಸದ್ಯ ಎರಡೂ ಕಡೆಗಳ ಯೋಧರು ಬಹುತೇಕ ಸ್ಥಳಗಳಿಂದ ಹಿಂದೆ ಸರಿದಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಈಗ ಎಲ್ಲವೂ ಶಾಂತವಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಚೀನಾ ಭಾರತದೊಂದಿಗೆ ಶಾಂತಿಯುತವಾದ ಅಭಿವೃದ್ಧಿಯ ಸಂಬಂಧವನ್ನು ಬಯಸುತ್ತದೆಯೇ ಹೊರತು, ಚೀನಾ ಭಾರತಕ್ಕೆ ವ್ಯೂಹಾತ್ಮಕ ಬೆದರಿಕೆಯಾಗಲು ಬಯಸದು." ಎಂದು ರಾಯಭಾರಿ ಸನ್ ವೀಡಾಂಗ್ ಹೇಳಿದರು.

ಗಲ್ವಾನ್​ ಮೇಲೆ ಚೀನಾ ಹಕ್ಕು ಪ್ರತಿಪಾದನೆಯು ಇತ್ತೀಚಿನದಾಗಿದೆ ಹಾಗೂ ಅದು ಅಸಮರ್ಥನೀಯವಾಗಿದೆ ಎಂಬುದಕ್ಕೆ ವೀಡಾಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

"ಪ್ಯಾಂಗಾಂಗ್​ ಲೇಕ್​ನ ಉತ್ತರ ದಡದಲ್ಲಿ ಚೀನಾದ ನಿಯಂತ್ರಣ ರೇಖೆ ಇದ್ದು, ಇದು ಬಹುಕಾಲದಿಂದ ಇರುವ ವಾಸ್ತವಿಕ ನಿಯಂತ್ರಣ ರೇಖೆಯೇ ಆಗಿದೆ. ಚೀನಾ ತನ್ನ ಭೂಭಾಗವನ್ನು ವಿಸ್ತರಿಸಿಕೊಳ್ಳುತ್ತಿದೆ ಎಂಬ ವಿಷಯ ಸುಳ್ಳು." ಎಂದು ಅವರು ನುಡಿದರು.

ನಕಾಶೆಗಳನ್ನು ಹಸ್ತಾಂತರಿಸಿಕೊಳ್ಳುವ ಬಗ್ಗೆ ಹಾಗೂ 2002 ರ ನಂತರ ವಾಸ್ತವಿಕ ನಿಯಂತ್ರಣ ರೇಖೆಯ ಬಗ್ಗೆ ಸ್ಪಷ್ಟತೆ ಹೊಂದಲು ಚೀನಾ ಏಕೆ ಹಿಂಜರಿಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸನ್ ವೀಡಾಂಗ್​- "ಚರ್ಚೆಗಳ ಸಮಯದಲ್ಲಿ ಯಾವುದೇ ಒಂದು ದೇಶವು ಏಕಪಕ್ಷೀಯವಾಗಿ ವಾಸ್ತವಿಕ ನಿಯಂತ್ರಣ ರೇಖೆಯನ್ನು ಪ್ರತಿಪಾದಿಸಿದಲ್ಲಿ ಅದು ಬಹುದೊಡ್ಡ ವಿವಾದಕ್ಕೆ ಕಾರಣವಾಗಬಹುದು. ವಾಸ್ತವಿಕ ನಿಯಂತ್ರಣ ರೇಖೆ ಹೊಂದುವ ಉದ್ದೇಶವೇ ಇದರಿಂದ ವಿಫಲವಾಗಬಹುದು" ಎಂದರು.

"ತೈವಾನ್, ಹಾಂಗ್​ ಕಾಂಗ್​, ಜಿಂಜಿಯಾಂಗ್, ಜಿಜಾಂಗ್​ ವ್ಯವಹಾರಗಳು ಚೀನಾದ ಆಂತರಿಕ ವಿಷಯಗಳಾಗಿವೆ. ಇವು ಚೀನಾದ ಸಾರ್ವಭೌಮತೆ ಹಾಗೂ ಸುರಕ್ಷತೆಗೆ ಸಂಬಂಧಿಸಿದ್ದಾಗಿವೆ. ಇತರ ಯಾವುದೇ ದೇಶದ ಆಂತರಿಕ ವ್ಯವಹಾರಗಳಲ್ಲಿ ಚೀನಾ ಮೂಗು ತೂರಿಸುವುದಿಲ್ಲ. ಹಾಗೆಯೇ ತನ್ನ ದೇಶದ ವ್ಯವಹಾರಗಳಲ್ಲಿ ಇತರ ದೇಶಗಳು ಹಸ್ತಕ್ಷೇಪ ಮಾಡಲು ಅವಕಾಶ ನೀಡಲ್ಲ." ಎಂದು ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ವೀಡಾಂಗ್​ ಪರೋಕ್ಷ ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.