ಬೀಜಿಂಗ್: ಮಹಾಮಾರಿ ಕೊರೊನಾ ವೈರಸ್ನಿಂದ ಮೃತಪಟ್ಟಿರುವ ಸಂಖ್ಯೆ 169 ಕ್ಕೆ ಏರಿದ್ದು, 7,711 ಪ್ರಕರಣಗಳು ವರದಿಯಾಗಿದೆ ಎಂದು ಚೀನಾ ಸರ್ಕಾರ ದೃಢಪಡಿಸಿದೆ.
-
#Coronavirus death toll in China rises to 169, according to the government: AFP news agency.
— ANI (@ANI) January 29, 2020 " class="align-text-top noRightClick twitterSection" data="
">#Coronavirus death toll in China rises to 169, according to the government: AFP news agency.
— ANI (@ANI) January 29, 2020#Coronavirus death toll in China rises to 169, according to the government: AFP news agency.
— ANI (@ANI) January 29, 2020
ಸೋಂಕಿನ ಪ್ರಮಾಣ ಶೇ.30% ರಷ್ಟು ಹೆಚ್ಚಾಗಿದ್ದು, 1,700 ಹೊಸ ಪ್ರಕರಣಗಳು, 4,148 ಹೊಸ ಶಂಕಿತ ಪ್ರಕರಣಗಳು ವರದಿಯಾಗಿದೆ. 1,370 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, 12,167 ಜನರು ಸೋಂಕಿಗೆ ಒಳಗಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಬುಧವಾರ ಮೃತಪಟ್ಟ 38 ಮಂದಿಯಲ್ಲಿ ಹುಬೈ ಪ್ರಾಂತ್ಯದಲ್ಲೇ 37 ಸಾವಾಗಿದೆ, 124 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.
-
Three Japanese evacuated from the Chinese city of Wuhan have the novel coronavirus says Japan's health minister: AFP news agency
— ANI (@ANI) January 30, 2020 " class="align-text-top noRightClick twitterSection" data="
">Three Japanese evacuated from the Chinese city of Wuhan have the novel coronavirus says Japan's health minister: AFP news agency
— ANI (@ANI) January 30, 2020Three Japanese evacuated from the Chinese city of Wuhan have the novel coronavirus says Japan's health minister: AFP news agency
— ANI (@ANI) January 30, 2020
ಸೋಂಕು ತಗುಲಿದ್ದ ಮೂವರು ಜಪಾನಿಯನ್ನರನ್ನು ಚೀನಾದ ವುಹಾನ್ ನಗರದಿಂದ ದೇಶಕ್ಕೆ ಕರೆತರಲಾಗಿದೆ ಎಂದು ಜಪಾನ್ನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಭಾರತ, ಅಮೆರಿಕಾ, ಜಪಾನ್ ಸೇರಿದಂತೆ ಇತರ ರಾಷ್ಟ್ರಗಳು ಚೀನಾದಲ್ಲಿರುವ ತಮ್ಮ ಪ್ರಜೆಗಳನ್ನು ಕರೆತರುವ ಪ್ರಯತ್ನ ಮಾಡುತ್ತಿವೆ. ಆದರೆ ಸದ್ಯ ಜನವರಿ 31 ರಿಂದ ಫೆಬ್ರವರಿ 14 ರವರೆಗೆ ದೆಹಲಿ-ಶಾಂಘೈ ಮಾರ್ಗದಲ್ಲಿ ಏರ್ ಇಂಡಿಯಾ ತನ್ನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ. ಇಂಡಿಗೊ ವಿಮಾನಯಾನ ಸಂಸ್ಥೆ ಕೂಡ ಫೆಬ್ರವರಿ 1 ರಿಂದ 20ರ ವರೆಗೆ ಬೆಂಗಳೂರು-ಹಾಂಕಾಂಗ್ ಮಾರ್ಗ ಹಾಗೂ ದೆಹಲಿ-ಚೆಂಗ್ಡು ಮಾರ್ಗದಲ್ಲಿ ತನ್ನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿವೆ.