ETV Bharat / international

ತೈವಾನ್‌ಗೆ ಅಮೆರಿಕ ನಿಯೋಗ ಭೇಟಿ; ಉರಿದು ಬಿದ್ದ ಚೀನಾ!

author img

By

Published : Sep 18, 2020, 6:27 PM IST

ತೈವಾನ್‌ಗೆ ಅಮೆರಿಕಾದ ನಿಯೋಗ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಮತ್ತೆ ಉದ್ಧಟನ ಪ್ರದರ್ಶಿಸಿದ್ದು, ತೈವಾನ್‌ ಗಡಿಯಲ್ಲಿ ಡ್ರ್ಯಾಗನ್‌ ದೇಶದ ನೌಕಾದಳ ಮತ್ತು ವಾಯು ಸೇನೆ ಶಕ್ತಿ ಪ್ರದರ್ಶನ ನೀಡುವ ಮೂಲಕ ಎಚ್ಚರಿಕೆ ನೀಡಿದೆ.

china-conducts-drills-as-us-envoy-holds-talks-in-taiwan
ತೈವಾನ್‌ಗೆ ಅಮೆರಿಕಾ ನಿಯೋಗ ಭೇಟಿ; ಉರಿದು ಬಿದ್ದ ಚೀನಾ!

ತೈಪೆ(ತೈವಾನ್): ಚೀನಾ ಕೇವಲ ಭಾರತದ ಗಡಿಯಲ್ಲಿ ಮಾತ್ರ ಉದ್ಧಟನ ಪ್ರದರ್ಶಿಸುತ್ತಿಲ್ಲ. ಬದಲಾಗಿ ನೆರೆಯ ನೇಪಾಳ, ತೈವಾನ್‌ ಸೇರಿದಂತೆ ಇತರೆ ನೆರೆಯವರೊಂದಿಗೂ ಕಿರಿಕ್‌ ಮಾಡಿಕೊಳ್ಳುತ್ತಲೇ ಇದೆ. ಇತ್ತೀಚೆಗಷ್ಟೇ ತೈವಾನ್‌ಗೆ ಚೀನಾ ಸೇನೆ ಬೆದರಿಕೆ ಹಾಕಿತ್ತು. ಇದರ ಬೆನ್ನಲ್ಲೇ ಅಮೆರಿಕಾದ ಉನ್ನತ ಮಟ್ಟದ ನಿಯೋಗ 2ನೇ ಬಾರಿ ತೈವಾನ್‌ಗೆ ಭೇಟಿ ನೀಡಿದೆ.

ಅಮೆರಿಕಾದ ಆರ್ಥಿಕ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಕೀತ್ ಕ್ರಾಚ್ ನೇತೃತ್ವದ ನಿಯೋಗ ಇಂದು ತೈವಾನ್‌ಗೆ ಬಂದಿಳಿದಿದ್ದು, ಇಲ್ಲಿನ ಆರ್ಥಿಕ ವ್ಯವಹಾರಗಳ ಸಚಿವರ ಜೊತೆ ಮಾತುಕತೆ ನಡೆಸಲಿದ್ದಾರೆ. ಉದ್ಯಮಿಗಳನ್ನು ಭೇಟಿ ಮಾಡಲಿರುವ ಕ್ರಾಚ್‌, ಅಧ್ಯಕ್ಷೆ ತ್ಸೈ ಇಂಗ್-ವೆನ್ ಅವರೊಂದಿಗೆ ರಾತ್ರಿಯ ಔತಣ‌ ಕೂಟದಲ್ಲಿಂದು ಭಾಗವಹಿಸಲಿದ್ದಾರೆ.

ಚೀನಾದ ನೌಕಾಪಡೆ ಮತ್ತು ವಾಯು ಸೇನೆಗಳು ತೈವಾನ್‌ ಗಡಿ ಸಮೀಪದಲ್ಲೇ ತಮ್ಮ ಶಕ್ತಿ ಪ್ರದರ್ಶನ ನೀಡುತ್ತಿವೆ ಎಂದು ಅಲ್ಲಿನ ಪೂರ್ವ ವಿಭಾಗದ ಕಮಾಂಡೆಂಟ್‌ ತಮ್ಮ ಮೈಕ್ರೋಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಅಮೆರಿಕಾದ ನಿಯೋಗ ಭೇಟಿಯನ್ನು ಚೀನಾ ಖಂಡಿಸಿದೆ. ತೈವಾನ್‌ ತನ್ನದೇ ಆದ ಪ್ರಾದೇಶಿಕ ಸಮಗ್ರತೆಯನ್ನು ಹೊಂದಿದೆ. ಇತರೆ ಯಾವುದೇ ದೇಶಗಳು ತೈವಾನ್‌ನೊಂದಿಗೆ ಅಧಿಕೃತ ಮಾತುಕತೆ ನಡೆಸಿದರೆ ಅದನ್ನು ಬಲವಾಗಿ ಖಂಡಿಸುತ್ತೇವೆ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.