ETV Bharat / international

ಮಾರ್ಕೆಟ್​ನಲ್ಲಿ ಬಾಂಬ್​ ಸ್ಫೋಟ... ಮಕ್ಕಳು ಸೇರಿ 23 ಮಂದಿ ದುರ್ಮರಣ!

author img

By

Published : Jun 29, 2020, 6:06 PM IST

ತಾಲಿಬಾನ್​ ಉಗ್ರರು ನಡೆದಿದ್ದಾರೆ ಎನ್ನಲಾಗಿರುವ ಬಾಂಬ್​ ಸ್ಫೋಟದಲ್ಲಿ ಮಕ್ಕಳು ಸೇರಿ 23 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.

Afghanistan
Afghanistan

ಆಫ್ಘಾನಿಸ್ತಾನ: ಜನನಬೀಡ ಮಾರ್ಕೆಟ್​​ನಲ್ಲಿ ಬಾಂಬ್​ ಸ್ಫೋಟಗೊಂಡ ಪರಿಣಾಮ ಮಕ್ಕಳು ಸೇರಿದಂತೆ 23 ಮಂದಿ ಸಾವನ್ನಪ್ಪಿರುವ ಘಟನೆ ಆಫ್ಘಾನಿಸ್ತಾನದ ಹೆಲ್ಮಂಡ್​ನಲ್ಲಿ ನಡೆದಿದೆ.

ಜನರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅಲ್ಲಿನ ಮಿಲಿಟರಿ ಪಡೆ ತಿಳಿಸಿದ್ದು, ಕಾರ್​ನಲ್ಲಿ ಇಡಲಾಗಿದ್ದ ಬಾಂಬ್​ ಸ್ಫೋಟಗೊಂಡಿದೆ. ತಾಲಿಬಾನ್​ ಉಗ್ರ ಸಂಘಟನೆ ಈ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ತಾಲಿಬಾನ್​ ಇದೊಂದು ಮಿಲಿಟರಿ ದಾಳಿ ಎಂದು ಪ್ರತ್ಯುತ್ತರ ನೀಡಿದೆ.

ಜೂನ್​ 25ರಂದು ಅಫ್ಘಾನಿಸ್ತಾನದ ಉತ್ತರ ಬಾಲ್ಕ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 25 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಈ ದಾಳಿ ನಡೆದಿರುಬಹುದು ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.