ETV Bharat / international

ಭಾರತದಿಂದ ಆಸ್ಟ್ರೇಲಿಯಾಕ್ಕೆ ಮರಳಿದರೆ 5 ವರ್ಷ ಜೈಲು ಶಿಕ್ಷೆ..! - Australia coronavirus updates

ಆಸ್ಟ್ರೇಲಿಯಾ ಸರ್ಕಾರವು ತನ್ನ ನಾಗರಿಕರು ಭಾರತಕ್ಕೆ ಬಂದರೆ ಅವರು ಉದ್ದೇಶಿತ ಆಗಮನದ 14 ದಿನಗಳಲ್ಲಿ ದೇಶಕ್ಕೆ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಶುಕ್ರವಾರ ರಾಷ್ಟ್ರೀಯ ಕ್ಯಾಬಿನೆಟ್ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಆದೇಶ ಉಲ್ಲಂಘಿಸಿ ಯಾರಾದರೂ ಭಾರತದಿಂದ ಆಸ್ಟ್ರೇಲಿಯಾಕ್ಕೆ ಮರಳಿದರೆ ಅಂಥವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Australians to face five-year jail or hefty fine if they return home from India
ಭಾರತದಿಂದ ಆಸ್ಟ್ರೇಲಿಯಾಕ್ಕೆ ಮರಳಿದರೆ 5 ವರ್ಷ ಜೈಲು ಶಿಕ್ಷೆ
author img

By

Published : May 1, 2021, 10:07 AM IST

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಭಾರತದಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಆಸ್ಟ್ರೇಲಿಯಾಗೆ ಭಾರತದಿಂದ ಪ್ರಯಾಣ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಆಸ್ಟ್ರೇಲಿಯಾ ಸರ್ಕಾರವು ತನ್ನ ನಾಗರಿಕರು ಭಾರತಕ್ಕೆ ಬಂದರೆ ಅವರು ಉದ್ದೇಶಿತ ಆಗಮನದ 14 ದಿನಗಳಲ್ಲಿ ದೇಶಕ್ಕೆ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಹಾಗೊಂದು ವೇಳೆ ನಿಯಮ ಮೀರಿ ದೇಶಕ್ಕೆ ಪ್ರವೇಶಿಸಿದರೆ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಅಥವಾ ಭಾರಿ ದಂಡವನ್ನು ವಿಧಿಸಲಾಗುವುದು ಎಂದು ಹೇಳಿದೆ.

ಶುಕ್ರವಾರ ರಾಷ್ಟ್ರೀಯ ಕ್ಯಾಬಿನೆಟ್ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದ್ದು, ಸೋಮವಾರದಿಂದ (ಮೇ 3) ಜಾರಿಗೆ ಬರಲಿದೆ. ಸೋಂಕಿನ ಪ್ರಕರಣಗಳಲ್ಲಿ ಭಾರತ ಉಲ್ಬಣವನ್ನು ಎದುರಿಸುತ್ತಿರುವ ಕಾರಣ ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶವದಿಂದ ಈ ಕ್ರಮ ಜಾರಿಗೆ ಬರಲಿದೆ ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ಹೇಳಿದ್ದಾರೆ. ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಮ್‌ಒ) ಅವರ ಸಲಹೆಯ ಮೇರೆಗೆ ಮೇ 15 ರಂದು ನಿರ್ಧಾರವನ್ನು ಪರಿಷ್ಕರಿಸಲಾಗುವುದು.

"ನಮ್ಮ ಹೃದಯಗಳು ಭಾರತದ ಜನರಿಗೆ ಮತ್ತು ನಮ್ಮ ಭಾರತೀಯ-ಆಸ್ಟ್ರೇಲಿಯಾ ಸಮುದಾಯಕ್ಕೆ ಸದಾ ಮಿಡಿಯುತ್ತವೆ. ಭಾರತದಲ್ಲಿರುವ ಸ್ನೇಹಿತರು ಮತ್ತು ಅವರ ಕುಟುಂಬಗಳು ತೀವ್ರ ಅಪಾಯದಲ್ಲಿವೆ. ಹೀಗಾಗಿ 1,000 ಕ್ಕೂ ಹೆಚ್ಚು ವೆಂಟಿಲೇಟರ್‌ಗಳು ಸೇರಿದಂತೆ ಆಸ್ಟ್ರೇಲಿಯಾವು ಭಾರತಕ್ಕೆ ತುರ್ತು ವೈದ್ಯಕೀಯ ವಸ್ತುಗಳನ್ನು ಒದಗಿಸಲಿದೆ. ಇದಲ್ಲದೆ ಪಿಪಿಇ ಕಿಟ್​, ಒಂದು ಮಿಲಿಯನ್ ಶಸ್ತ್ರಚಿಕಿತ್ಸಾ ಮುಖವಾಡಗಳು, 1,00,000 ಶಸ್ತ್ರಚಿಕಿತ್ಸಾ ನಿಲುವಂಗಿಗಳು, 1,00,000 ಕನ್ನಡಕಗಳು, 1,00,000 ಜೋಡಿ ಕೈಗವಸುಗಳನ್ನು ಪೂರೈಸಲು ಮುಂದಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,01,993 ಜನರಿಗೆ ಸೋಂಕು ತಗುಲಿದ್ದು, 3,523 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಅಲ್ಲದೇ 2,99,988 ಜನ ಇದೇ ಸಮಯದಲ್ಲಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.