ETV Bharat / international

ಭಾರತದ ಕೋವ್ಯಾಕ್ಸಿನ್‌ ಲಸಿಕೆಗೆ ಆಸ್ಟ್ರೇಲಿಯಾ ಅನುಮೋದನೆ

author img

By

Published : Nov 1, 2021, 4:12 PM IST

ಕೋವ್ಯಾಕ್ಸಿನ್ (Covaxin) ಮತ್ತು BBIBP-CorV ಹಾಗು ಕೋವಿಶೀಲ್ಡ್ ಪಡೆದುಕೊಂಡ ಚೀನಾ, ಭಾರತ ಹಾಗೂ ಇತರ ದೇಶಗಳ ಅನೇಕ ನಾಗರಿಕರು ನಮ್ಮ ರಾಷ್ಟ್ರಕ್ಕೆ ಬಂದಾಗ ಅವರನ್ನು ಸಂಪೂರ್ಣ ಲಸಿಕಾಕರಣವಾಗಿದೆ ಎಂದು ಪರಿಗಣಿಸಲಾಗುತ್ತದೆ ಆಸ್ಟ್ರೇಲಿಯಾ ತಿಳಿಸಿದೆ.

ಪ್ರಯಾಣದ ಉದ್ದೇಶಗಳಿಗಾಗಿ ಕೋವಾಕ್ಸಿನ್​ ಅನುಮೋದಿಸಿದ ಆಸ್ಟ್ರೇಲಿಯಾ

ಕ್ಯಾನ್ಬೆರ: ಆಸ್ಟ್ರೇಲಿಯಾ ಸರ್ಕಾರವು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಹೀಗಾಗಿ ಕೋವ್ಯಾಕ್ಸಿನ್ ಪಡೆದ ಭಾರತೀಯರಿಗೆ ದೇಶ ಪ್ರವೇಶಿಸಲು ಇದೀಗ ಅವಕಾಶ ದೊರೆತಿದೆ.

ಕಳೆದ ತಿಂಗಳು ಆಸ್ಟ್ರೇಲಿಯಾವು ಪ್ರಯಾಣದ ಉದ್ದೇಶಗಳಿಗಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಕೋವಿಶೀಲ್ಡ್ ಲಸಿಕೆಯನ್ನು ಗುರುತಿಸಿತ್ತು. ಈ ನಿಯಮವು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮರಳುವಿಕೆ ಮತ್ತು ಆಸ್ಟ್ರೇಲಿಯಾಕ್ಕೆ ನುರಿತ ಮತ್ತು ಕೌಶಲ್ಯಪೂರ್ಣ ಕಾರ್ಮಿಕರ ಪ್ರಯಾಣದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಕೋವ್ಯಾಕ್ಸಿನ್, BBIBP-CorV ಹಾಗು ಕೋವಿಶೀಲ್ಡ್ ಪಡೆದುಕೊಂಡ ಚೀನಾ ಮತ್ತು ಭಾರತ ಹಾಗೂ ಇತರ ದೇಶಗಳ ಅನೇಕ ನಾಗರಿಕರು ನಮ್ಮ ರಾಷ್ಟ್ರಕ್ಕೆ ಬಂದಾಗ ಅವರನ್ನು ಸಂಪೂರ್ಣ ಲಸಿಕಾಕರಣವಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಅಸ್ಟ್ರೇಲಿಯಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

COVAXIN ಎಂದರೇನು?

ಕೊವ್ಯಾಕ್ಸಿನ್ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಸ್ಥಳೀಯ ಲಸಿಕೆಯಾಗಿದೆ.

ಕೋವಾಕ್ಸಿನ್ ಕೋವಿಡ್ ವಿರುದ್ಧ ಶೇ 77.8 ರಷ್ಟು ಪರಿಣಾಮಕಾರಿತ್ವ ಮತ್ತು ಹೊಸ ಡೆಲ್ಟಾ ರೂಪಾಂತರದ ವಿರುದ್ಧ ಶೇ 65.2 ರಷ್ಟು ರಕ್ಷಣೆ ಒದಗಿಸುತ್ತಿದೆ.

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಎರಡು ಲಸಿಕೆಗಳಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.