ಲಾಹೋರ್ (ಪಾಕಿಸ್ತಾನ): ಕಾರ್ಯಕರ್ತೆ ಕರಿಮಾ ಬಲೂಚ್ ಅವರ ಅಂತ್ಯಕ್ರಿಯೆ ತಡೆಯಲು ಮುಂದಾದ ಸ್ಥಳೀಯ ಅಧಿಕಾರಿಗಳ ವಿರುದ್ಧ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (ಎಚ್‌ಆರ್‌ಸಿಪಿ) ಮಂಗಳವಾರ ವಾಗ್ದಾಳಿ ನಡೆಸಿದೆ. ಹತ್ಯೆಗೀಡಾದ ಕಾರ್ಯಕರ್ತೆಯ ಅಂತ್ಯಕ್ರಿಯೆ ಸಮಾರಂಭವನ್ನು ವಿಫಲಗೊಳಿಸುವ ಅಧಿಕಾರಿಗಳ ಪ್ರಯತ್ನ ನಾಚಿಕೆಗೇಡಿತನದಿಂದ ಕೂಡಿದೆ ಎಂದು ಹೇಳಿದೆ.
"ಕಾರ್ಯಕರ್ತೆ ಕರಿಮಾ ಬಲೂಚ್ ಅವರ ಅಂತ್ಯಕ್ರಿಯೆಯ ಕಾರ್ಯಕ್ರಮವನ್ನು ವಿಫಲಗೊಳಿಸಲು ಅಧಿಕಾರಿಗಳು ಪ್ರಯತ್ನಿಸಿದ ರೀತಿ ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ವಿಷಾದನೀಯವಾಗಿದೆ. ಬಲೂಚಿಸ್ತಾನ್ ಮತ್ತು ಅದರ ಜನರ ವರ್ತನೆ ರಾಜ್ಯ ಹೇಗಿದೆ ಎಂಬುದನ್ನು ತೋರಿಸುತ್ತದೆ" ಎಂದು ಎಚ್‌ಆರ್‌ಸಿಪಿ ಟ್ವೀಟ್ ಮಾಡಿದೆ.
ಕರಿಮಾ ಬಲೂಚ್ ಅವರ ಅಂತ್ಯಕ್ರಿಯೆಯ ವೇಳೆ ನಡೆದ ಘಟನೆಗೆ ಪಾಕಿಸ್ತಾನದ ಸೆನೆಟ್ನಲ್ಲಿ ಸೋಮವಾರ ಪ್ರತಿಪಕ್ಷದ ಸದಸ್ಯರು ಕಳವಳ ವ್ಯಕ್ತಪಡಿಸಿದ್ರು. ಕಳೆದ ತಿಂಗಳು ಕೆನಡಾದಲ್ಲಿ ನಿಗೂಢ ಸ್ಥಿತಿಯಲ್ಲಿ ಕರಿಮಾ ಅವರ ಮೃತದೇಹ ಪತ್ತೆಯಾಗಿತ್ತು.
ಓದಿ:ವಿಚಾರಣೆ ಹಂತದಲ್ಲಿ ಟ್ರಂಪ್ ದೋಷಾರೋಪಣೆ: ಫೆ. 9 ರಿಂದ ವಾದ - ಪ್ರತಿವಾದಗಳು ಪ್ರಾರಂಭ
ಕೊನೆಯ ಗೌರವ ಸಲ್ಲಿಸಲು ಬಂದ ಸಾವಿರಾರು ಜನರನ್ನು ಅವರ ಬಳಿ ಅನುಮತಿಸದ ಕಾರಣ ಅವರನ್ನು ಸೈನ್ಯದ ಕಾವಲಿನಲ್ಲಿ ಸಮಾಧಿ ಮಾಡಲಾಯಿತು ಎಂದು ಬಲೂಚಿಸ್ತಾನ್ ಟೈಮ್ಸ್ ವರದಿ ಮಾಡಿದೆ. ಅವರ ಸಮಾಧಿ ಮುಂಚಿತವಾಗಿ ಜಿಲ್ಲೆಯಲ್ಲಿ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಹೇರಲಾಗಿತ್ತು.
ಟೊರೊಂಟೊ, ಬರ್ಲಿನ್ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ಬಲೂಚ್ ವಲಸೆಗಾರರು ಬೀದಿಗಿಳಿದಿದ್ದರಿಂದ ಕರಿಮಾ ಅವರ ಸಾವು ಯುರೋಪ್ ಮತ್ತು ಉತ್ತರ ಅಮೆರಿಕಾದಾದ್ಯಂತ ಪ್ರತಿಭಟನೆಗೆ ನಾಂದಿ ಹಾಡಿತು.