ಅಫ್ಘಾನಿಸ್ತಾನ: ತಾಲಿಬಾನ್ ಭಯೋತ್ಪಾದಕರು ಮತ್ತು ಉತ್ತರ ಪ್ರತಿರೋಧ ಪಡೆಗಳ ನಡುವಿನ ಭೀಕರ ಕಾಳಗದ ನಡುವೆ, ಅಫ್ಘಾನಿಸ್ತಾನದ ಮಾದಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ತಾಲಿಬಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಾಲಿಬಾನಿಗಳು ಯುದ್ಧ ಅಪರಾಧಗಳನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ತಾಲಿಬಾನಿಗಳು ಜನಾಂಗೀಯ ತಾರತಮ್ಯ ಮಾಡುತ್ತಿದ್ದಾರೆ ಮತ್ತು ಪಂಜಶೀರ್‌ನ ಯುವಕರನ್ನು ಗಣಿ ತೆರವುಗೊಳಿಸುವ ಸಾಧನವಾಗಿ ಬಳಸುತ್ತಿದ್ದಾರೆ. ಫೋನ್ ಲೈನ್‌ಗಳು, ವಿದ್ಯುತ್ ಮತ್ತು ಔಷಧಿಗಳ ಪ್ರವೇಶವನ್ನು ನಿರ್ಬಂಧಿಸುವುದರ ಹೊರತಾಗಿ ಅವರನ್ನು ಗಣಿ ಪ್ರದೇಶಗಳಲ್ಲಿ ನಡೆಯುವ ಕೃತ್ಯ ಎಸಗುತ್ತಿದ್ದಾರೆ ಎಂದು ಸಲೇಹ್ ಹೇಳಿದ್ದಾರೆ.
ವಿಶ್ವಸಂಸ್ಥೆ(UN) ಮತ್ತು ಇತರ ವಿಶ್ವ ನಾಯಕರು ತಾಲಿಬಾನಿಗಳ ಅಪರಾಧಗಳು ಮತ್ತು ಭಯೋತ್ಪಾದಕ ಕೃತ್ಯಗಳನ್ನು ತುರ್ತಾಗಿ ಗಮನಿಸಬೇಕು ಎಂದು ಮನವಿ ಮಾಡಿದ್ದಾರೆ.
-
Talibs have blocked humanitarian access to Panjshir, do racial profile of travelers, use military age men of Panjhsir as mine clearance tools walking them on mine fields, have shut phone, electricity & not allow medicine either. People can only carry small amount of cash. 1/2
— Amrullah Saleh (@AmrullahSaleh2) September 3, 2021 " class="align-text-top noRightClick twitterSection" data="
">Talibs have blocked humanitarian access to Panjshir, do racial profile of travelers, use military age men of Panjhsir as mine clearance tools walking them on mine fields, have shut phone, electricity & not allow medicine either. People can only carry small amount of cash. 1/2
— Amrullah Saleh (@AmrullahSaleh2) September 3, 2021Talibs have blocked humanitarian access to Panjshir, do racial profile of travelers, use military age men of Panjhsir as mine clearance tools walking them on mine fields, have shut phone, electricity & not allow medicine either. People can only carry small amount of cash. 1/2
— Amrullah Saleh (@AmrullahSaleh2) September 3, 2021
'ನಾನು ಪಲಾಯನ ಮಾಡಿಲ್ಲ':
ಪ್ರತಿರೋಧ ಪಡೆಗಳು ತಾಲಿಬಾನ್ ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ಅಮರುಲ್ಲಾ ಸಲೇಹ್ ಮತ್ತು ಉತ್ತರ ಒಕ್ಕೂಟದ ನಾಯಕ ಅಹ್ಮದ್ ಮಸೂದ್ ಪಂಜಶೀರ್‌ನಿಂದ ತಜಕಿಸ್ತಾನದಲ್ಲಿ ಆಶ್ರಯ ಪಡೆಯಲು ಇಲ್ಲಿಂದ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈ ಇಬ್ಬರೂ ನಾಯಕರು ಸುರಕ್ಷಿತವಾಗಿದ್ದು, ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರತಿರೋಧ ಪಡೆಗಳು ಪರ್ವಾನ್ ಪ್ರಾಂತ್ಯದ ರಾಜಧಾನಿ ಚರಿಕರ್ ಮತ್ತು ಆಯಕಟ್ಟಿನ ಸ್ಥಳವಾದ ಸಲಾಂಗ್ ಅನ್ನು ತಾಲಿಬಾನ್ ಹಿಡಿತದಿಂದ ಮುಕ್ತಗೊಳಿಸಿವೆ ಎನ್ನಲಾಗಿದೆ. ಸಲಾಂಗ್ ಅಫ್ಘಾನಿಸ್ತಾನ-ಉಜ್ಬೇಕಿಸ್ತಾನ್ ಹೆದ್ದಾರಿಯಲ್ಲಿರುವುದರಿಂದ ಇದು ಪ್ರಮುಖವಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಉತ್ತರ ಪ್ರತಿರೋಧ ಪಡೆಗಳಿಗೆ ಕಾರ್ಯತಂತ್ರದ ಪ್ರಯೋಜನವನ್ನು ಇದು ನೀಡುತ್ತದೆ.
ತಾಲಿಬಾನ್ ಉಗ್ರರು ಅಪಾರ ಪ್ರಮಾಣದ ರೈಫಲ್‌ಗಳು, ರಾಕೆಟ್ ಲಾಂಚರ್‌ಗಳು, ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಅಫ್ಘಾನಿಸ್ತಾನದಿಂದ ನಿರ್ಗಮಿಸಿದ ನಂತರ ಯುಎಸ್ ಬಿಟ್ಟ ಮಿಲಿಟರಿ ಟ್ರಾನ್ಸ್‌ಪೋರ್ಟರ್‌ಗಳು ಸೇರಿದಂತೆ ಬೃಹತ್ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ, ಅಹ್ಮದ್ ಮಸೂದ್ ನೇತೃತ್ವದ ಉತ್ತರ ಒಕ್ಕೂಟವು ಪಂಜ್‌ಶೀರ್ ಭದ್ರಕೋಟೆಯನ್ನು ಹಿಡಿದಿಟ್ಟುಕೊಂಡಿವೆ. ಈ ಕೋಟೆಯನ್ನು ಬೇಧಿಸಲು ತಾಲಿಬಾನಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಹೇಳಲಾಗಿದೆ.
ತಾಲಿಬಾನಿಗಳು ತಾವು ಬದಲಾಗಿದ್ದೇವೆ ಎಂದು ಹೇಳಿಕೊಂಡರೂ, ಅದರ ಭಯೋತ್ಪಾದಕತೆಯ ಅಟ್ಟಹಾಸವು ಇನ್ನೂ ಹೆಚ್ಚಾಗಿಯೇ ಮುಂದುವರಿದಿದೆ. ಇದು ಅವರ ಹೇಳಿಕೆಗೆ ವಿರುದ್ಧವಾದ ಚಿತ್ರಣವನ್ನು ತೋರಿಸುತ್ತಿದೆ. ಸರ್ಕಾರಿ ನೌಕರರು ಮತ್ತು ಅಫ್ಘಾನ್ ಸೇನಾ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಸಾಮೂಹಿಕ ಕ್ಷಮಾಪಣೆ ನೀಡಲು ತಾಲಿಬಾನ್ ಮುಂದಾಗಿತ್ತು. ಆದರೆ, ತಾಲಿಬಾನ್ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಇದಕ್ಕೆ ಹಲವಾರು ಹುಧಾಹರಣೆಗಳು ನಮ್ಮ ಕಣ್ಣಮುಂದಿವೆ.
ಹಲವಾರು ಮಿಲಿಟರಿ ಸಿಬ್ಬಂದಿಯನ್ನು ತಾಲಿಬಾನ್ ಭಯೋತ್ಪಾದಕರು ಹಗಲು ಹೊತ್ತಿನಲ್ಲಿಯೇ ಕ್ರೂರವಾಗಿ ಕೊಂದಿದ್ದಾರೆ. ಇದರ ನಡುವೆ ಅಹ್ಮದ್ ಮಸೂದ್ ಮತ್ತು ಅಮರುಲ್ಲಾ ಸಲೇಹ್ ನೇತೃತ್ವದಲ್ಲಿ ಉತ್ತರ ಪ್ರತಿರೋಧ ಪಡೆಗಳು ಪಂಜಶೀರ್ ರಕ್ಷಣೆಯ ಹರಸಾಹಸ ಮುಂದುವರೆಸಿವೆ. ಹಾಗೆಯೇ ಇದು ತಾಲಿಬಾನ್ ಆಳ್ವಿಕೆಯಿಂದ ಮುಕ್ತವಾಗಿರುವ ಏಕೈಕ ಪ್ರಾಂತ್ಯವೂ ಹೌದು.
ಇದನ್ನೂ ಓದಿ:
'ಮಹಿಳೆಯರ ಹಕ್ಕುಗಳನ್ನು ಗೌರವಿಸಿ..': ಅಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ಮುಂದೆ ಮಹಿಳೆಯರ ಪ್ರತಿಭಟನೆ