ಇಸ್ಲಾಮಾಬಾದ್: ಪಾಕಿಸ್ತಾನ ವಾಯುಪಡೆಯ ಹೊಸ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಹಾಲಿ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಮುಜಾಹಿದ್ ಅನ್ವರ್ ಖಾನ್ ಮಾರ್ಚ್ 19 ರಂದು ನಿವೃತ್ತರಾಗಲಿದ್ದು, ನಂತರ ಸಿಧು ಅವರು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಸಿಧು 1986 ರಲ್ಲಿ ಪಾಕಿಸ್ತಾನದ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರಿಕೊಂಡರು. ಇವರು ಸಹಾಯಕ ವಾಯು ಸಿಬ್ಬಂದಿಯಾಗಿ ಮತ್ತು ವಾಯು ಸಿಬ್ಬಂದಿಯ ಸಹಾಯಕ ಮುಖ್ಯಸ್ಥರಾಗಿ (ಕಾರ್ಯಾಚರಣೆ ಸಂಶೋಧನೆ ಮತ್ತು ಅಭಿವೃದ್ಧಿ) ಹಾಗೂ ವಾಯು ಪ್ರಧಾನ ಕಚೇರಿ ಇಸ್ಲಾಮಾಬಾದ್‌ನಲ್ಲಿ ಯೋಜನೆಗಳ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ರಕ್ಷಣಾ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.