ಅಬುದಾಬಿ: ಆನ್ಲೈನ್ ಗೇಮ್ ಪಬ್ಜಿ ಬ್ಯಾನ್ ಮಾಡಲು ಭಾರತದಲ್ಲಿ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಯುಎಇನಲ್ಲೂ ಜನಪ್ರಿಯ ಗೇಮ್ ನಿಷೇಧಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಪಬ್ಜಿ ಆನ್ಲೈನ್ ಆಟ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆಟಕ್ಕೆ ಹೆಚ್ಚಿನ ಗಮನ ಕೊಡುವ ಮಕ್ಕಳು ಓದಿನತ್ತ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಯುಎಇನಲ್ಲಿ ಹೆತ್ತವರು ಪಬ್ಜಿ ಗೇಮ್ನ ವಿರುದ್ಧ ಕಿಡಿಕಾರಿದ್ದಾರೆ.
ಮಕ್ಕಳು ಪಬ್ಜಿ ಆಟದಲ್ಲೇ ಸಂಪೂರ್ಣ ತೊಡಗಿಸಿಕೊಳ್ಳುತ್ತಾರೆ. ಇದನ್ನು ಖಂಡಿತವಾಗಿಯೂ ಬ್ಯಾನ್ ಮಾಡಬೇಕು ಎನ್ನುವ ಕೂಗು ಯುಎಇನಲ್ಲಿ ಬಲವಾಗಿ ಕೇಳಿಸುತ್ತಿದೆ.
ಭಾರತದಲ್ಲಿ ಹಲವು ರಾಜ್ಯಗಳು ಪಬ್ಜಿ ಗೇಮ್ ಬ್ಯಾನ್ ಮಾಡಲು ಮುಂದಾಗಿವೆ. ಗುಜರಾತ್ನ ಕೆಲವು ವಿದ್ಯಾರ್ಥಿ ಹಾಸ್ಟೆಲ್ಗಳಲ್ಲಿ ಈ ಗೇಮ್ ಆಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.