ನವದೆಹಲಿ: ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆ ಭಾರತೀಯ ಅಧಿಕಾರಿಗಳು ಇಂದು 75 ಸಿಖ್ಖರನ್ನು ಸ್ಥಳಾಂತರಿಸಲಾಗುತ್ತಿದೆ. ಇವರನ್ನು ಕಾಬೂಲ್ನಿಂದ ದುಶಾಂಬೆ ಮೂಲಕ ಸ್ಥಳಾಂತರಿಸಲಾಗುತ್ತಿದ್ದು, ತಡರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರಾ ಮ್ಯಾನೇಜ್‌ಮೆಂಟ್ ಕಮಿಟಿ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಮಾಹಿತಿ ನೀಡಿದ್ದಾರೆ.
-
Update from Afghanistan: Another 75 Sikhs are being evacuated today frm Kabul via Dushanbe who will arrive in India late night today
— Manjinder Singh Sirsa (@mssirsa) August 23, 2021 " class="align-text-top noRightClick twitterSection" data="
We thank @PMOIndia and @MEAIndia for their massive support.
Thanking @vikramsahney ji for his support@thetribunechd @punjabkesari @ANI @republic https://t.co/SKGqMV8fXx
">Update from Afghanistan: Another 75 Sikhs are being evacuated today frm Kabul via Dushanbe who will arrive in India late night today
— Manjinder Singh Sirsa (@mssirsa) August 23, 2021
We thank @PMOIndia and @MEAIndia for their massive support.
Thanking @vikramsahney ji for his support@thetribunechd @punjabkesari @ANI @republic https://t.co/SKGqMV8fXxUpdate from Afghanistan: Another 75 Sikhs are being evacuated today frm Kabul via Dushanbe who will arrive in India late night today
— Manjinder Singh Sirsa (@mssirsa) August 23, 2021
We thank @PMOIndia and @MEAIndia for their massive support.
Thanking @vikramsahney ji for his support@thetribunechd @punjabkesari @ANI @republic https://t.co/SKGqMV8fXx
ಕಾಬೂಲ್ನಿಂದ ದುಶಾಂಬೆ ಮೂಲಕ ಇನ್ನೂ 75 ಸಿಖ್ಖರನ್ನು ಸ್ಥಳಾಂತರಿಸಲಾಗುತ್ತಿದ್ದು, ಇಂದು ತಡರಾತ್ರಿ ಅವರು ಭಾರತಕ್ಕೆ ಆಗಮಿಸಲಿದ್ದಾರೆ. ಅವರ ಸ್ಥಳಾಂತರಕ್ಕೆ ಸಹಕರಿಸಿದ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಇಲಾಖೆಗೆ ಧನ್ಯವಾದಗಳು ಎಂದು ಸಿರ್ಸಾ ಟ್ವೀಟ್ ಮಾಡಿದ್ದಾರೆ.
ಕಳೆದ ಆಗಸ್ಟ್ 15 ರಂದು ತಾಲಿಬಾನ್, ಆಫ್ಘನ್ಅನ್ನು ವಶಪಡಿಸಿಕೊಂಡ ಬಳಿಕ, ಲಕ್ಷಾಂತರ ಜನರು ದೇಶ ತೊರೆಯುತ್ತಿದ್ದಾರೆ. ಆಫ್ಘನ್ನಿಂದ ಭಾರತದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಭಯ ನೀಡಿತ್ತು.
ಇದನ್ನೂ ಓದಿ: ತಾಲಿಬಾನಿಗಳಿಂದ ರಕ್ಷಿಸಲು ವಿದ್ಯಾರ್ಥಿನಿಯರ ದಾಖಲೆ ಸುಟ್ಟುಹಾಕಿದ ಶಾಲಾ ಸಂಸ್ಥಾಪಕಿ