ಕಾಬೂಲ್: ಅಫ್ಘನ್ ಸೇನೆ ಹಾಗೂ ತಾಲಿಬಾನ್ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 24 ಉಗ್ರರನ್ನು ಬೇಟೆಯಾಡಲಾಗಿದ್ದು, 27 ಮಂದಿ ಗಾಯಗೊಂಡಿದ್ದಾರೆ.
ಅಫ್ಘಾನಿಸ್ತಾನದ ಜಬುಲ್ ಪ್ರಾಂತ್ಯದ ಅರ್ಘಂಡಾಬ್, ಶಿಂಕ್‌ಜೈ ಮತ್ತು ಷಾ ಜೋಯಿ ಜಿಲ್ಲೆಗಳಲ್ಲಿ ಅಫ್ಘನ್ ಪಡೆಯು ಕಾರ್ಯಾಚರಣೆ ನಡೆಸಿ ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಈ ಕುರಿತು ತಾಲಿಬಾನ್ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.