ETV Bharat / international

ತಾಲಿಬಾನ್ ಉಗ್ರರು ಅಡಗಿದ್ದಾರೆಂದು ಅಫ್ಘಾನಿಸ್ತಾನದಲ್ಲಿ ಏರ್​​ ಸ್ಟ್ರೈಕ್​: 12 ಮಕ್ಕಳ ದುರ್ಮರಣ - ತಾಲಿಬಾನ್ ಉಗ್ರರು

ಮಸೀದಿಯಲ್ಲಿ ತಾಲಿಬಾನ್ ಉಗ್ರರು ಅಡಗಿದ್ದಾರೆಂದು ಅಫ್ಘನ್​ ಭದ್ರತಾ ಪಡೆ ಏರ್​​ ಸ್ಟ್ರೈಕ್ ನಡೆಸಿದ್ದು, ಘಟನೆಯಲ್ಲಿ 12 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

Afghanistan
ಅಫ್ಘಾನಿಸ್ತಾನದಲ್ಲಿ ಏರ್​​ ಸ್ಟ್ರೈಕ್
author img

By

Published : Oct 22, 2020, 4:17 PM IST

ಕಾಬೂಲ್​: ಅಫ್ಘಾನಿಸ್ತಾನದ ಉತ್ತರ ತಖಾರ್ ಪ್ರಾಂತ್ಯದಲ್ಲಿನ ಮಸೀದಿಯ ಮೇಲೆ ನಡೆದ ವಾಯುದಾಳಿಯಲ್ಲಿ 12 ಮಕ್ಕಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ನಿನ್ನೆ ಬಹರಕ್ ಜಿಲ್ಲೆಯಲ್ಲಿ ನಡೆದ ಗಲಭೆಯಲ್ಲಿ ತಾಲಿಬಾನ್ ಉಗ್ರರು ಅಫ್ಘನ್​ ಭದ್ರತಾ ಪಡೆಯ 40 ಸಿಬ್ಬಂದಿ ಹತ್ಯೆ ಮಾಡಿದ್ದರು. ಈ ರಕ್ತಸಿಕ್ತ ದಾಳಿ ನಡೆದ ಕೆಲವೇ ಹೊತ್ತಿನಲ್ಲಿ ತಾಲಿಬಾನ್ ಉಗ್ರರು ಮಸೀದಿಯಲ್ಲಿ ಅಡಗಿದ್ದಾರೆಂಬ ಮಾಹಿತಿ ಸಿಕ್ಕಿದ್ದು, ಮಸೀದಿಯ ಮೇಲೆ ಏರ್​​ ಸ್ಟ್ರೈಕ್ ನಡೆಸಲಾಗಿದೆ. ಆದರೆ ಅಷ್ಟರಲ್ಲೇ ಉಗ್ರರು ಮಸೀದಿಯಿಂದ ಪರಾರಿಯಾಗಿದ್ದರು ಎಂದು ಅಫ್ಘನ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿ ನಡೆದ ದಾಳಿಗಳಲ್ಲಿ 100ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದು, ಸಾವಿರಾರು ಜನರು ತಮ್ಮ ಗ್ರಾಮಗಳನ್ನು ತೊರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.