ETV Bharat / international

ಚೀನಾದಲ್ಲಿ ಮೀನುಗಾರಿಕಾ ದೋಣಿ ಮಗುಚಿ ನಾಲ್ವರ ಸಾವು, ಐವರ ನಾಪತ್ತೆ - ಮೀನುಗಾರಿಕಾ ದೋಣಿ

ಚೀನಾದಲ್ಲಿ ಹೈಲಾಂಗ್​ಜಿಯಾಂಗ್ ಎಂಬ ಪ್ರದೇಶದಲ್ಲಿ ಮೀನುಗಾರಿಕಾ ದೋಣಿ ಮಗುಚಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

21 dead in fishing boat accident in China's northernmost province
ಚೀನಾದಲ್ಲಿ ಮೀನುಗಾರಿಕಾ ದೋಣಿ ಮಗುಚಿ ನಾಲ್ವರ ಸಾವು, ಐವರ ನಾಪತ್ತೆ
author img

By

Published : May 23, 2021, 5:48 AM IST

Updated : May 23, 2021, 9:54 AM IST

ಬೀಜಿಂಗ್: ಚೀನಾದ ಉತ್ತರದ ಪ್ರಾಂತ್ಯದಲ್ಲಿರುವ ಹೈಲಾಂಗ್‌ಜಿಯಾಂಗ್‌ ಪ್ರದೇಶದ ಮೀನುಗಾರಿಕಾ ದೋಣಿ ನದಿಯಲ್ಲಿ ಮಗುಚಿ ನಾಲ್ವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ.

ಕಿಕಿಹಾರ್ ನಗರದ ನದಿಯಲ್ಲಿ ಶನಿವಾರ ಬೆಳಗ್ಗೆ 9 ಗಂಟೆಗೆ ಅಪಘಾತ ಸಂಭವಿಸಿದ್ದು, 11 ಮಂದಿ ದೋಣಿಯಲ್ಲಿದ್ದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಾಧ್ಯಮ ವರದಿಯ ಪ್ರಕಾರ, ಇಬ್ಬರನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ನಾಪತ್ತೆಯಾದ ಐವರಿಗೆ ಶೋಧ ಕಾರ್ಯ ನಡೆಯುತ್ತಿದೆ.

ಕಳೆದ ತಿಂಗಳು, ಚೀನಾದಲ್ಲಿ ಝೆಜಿಯಾಂಗ್ ಪ್ರಾಂತ್ಯದಲ್ಲೂ ಇಂಥದ್ದೇ ಘಟನೆ ನಡೆದಿದ್ದು, ಮೀನುಗಾರಿಕಾ ದೋಣಿ ನದಿಯಲ್ಲಿ ಮುಳುಗಿ 12 ಮಂದಿ ಸಾವನ್ನಪ್ಪಿದ್ದರು.

Last Updated : May 23, 2021, 9:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.