ಕಾಬೂಲ್ : ಅಫ್ಘಾನಿಸ್ತಾನದ ಬಾಲ್ಕ್ ಪ್ರಾಂತ್ಯದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು 30 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಫ್ಘನ್ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಬಾಲ್ಕ್ ಪ್ರಾಂತ್ಯದ ದಾವ್ಲತಾಬಾದ್ ಜಿಲ್ಲೆಯ ಕಲ್ಟಾ ಗ್ರಾಮದಲ್ಲಿ ಸ್ಫೋಟಕ ಸಾಧನಗಳು ಮತ್ತು ಬಾಂಬ್‌ಗಳನ್ನು ತಯಾರಿಸುವ ತರಬೇತಿ ಪಡೆಯುತ್ತಿದ್ದ ವೇಳೆ ಐಇಡಿ ಸ್ಫೋಟಗೊಂಡಿದೆ. ಈ ಬಗ್ಗೆ ತಾಲಿಬಾನ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಎರಡನೇ ದೋಷಾರೋಪಣೆಯಲ್ಲಿ ಡೊನಾಲ್ಡ್ ಟ್ರಂಪ್ರನ್ನು ಖುಲಾಸೆಗೊಳಿಸಿದ ಸೆನೆಟ್!
ಅಫ್ಘಾನಿಸ್ತಾನದ ದೋಹಾದಲ್ಲಿ ಅಫ್ಘನ್ ಸರ್ಕಾರ ಹಾಗೂ ತಾಲಿಬಾನ್ ಪ್ರತಿನಿಧಿಗಳ ನಡುವಿನ ಶಾಂತಿ ಮಾತುಕತೆ ಸ್ಥಗಿತಗೊಂಡ ಬೆನ್ನಲ್ಲೇ ಫೆ.11 ಮತ್ತು 12ರಂದು ಅಫ್ಘಾನಿಸ್ತಾನ ಸೇನೆಯು ದಾಳಿ ನಡೆಸಿ 90ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿತ್ತು.