ಮನಿಲಾ: ಫಿಲಿಪ್ಪೀನ್ಸ್ನಲ್ಲಿ ಅಪ್ಪಳಿಸಿರುವ ಮೊಲೇವ್ ಚಂಡಮಾರುತ ಈಗಾಗಲೇ ಮೂವರನ್ನು ಬಲಿ ಪಡೆದಿದ್ದು, 13 ಮಂದಿ ಕಾಣೆಯಾಗಿರುವುದಾಗಿ ವರದಿಯಾಗಿದೆ.
ನಾಪತ್ತೆಯಾದ 13 ಜನರಲ್ಲಿ 10 ಮಂದಿ ಮೀನುಗಾರರಾಗಿದ್ದಾರೆ. 2,37,948 ಕುಟುಂಬಗಳ 9,14,709 ಜನರು ಸಂಕಷ್ಟಕ್ಕೊಳಗಾಗಿದ್ದು, 22,029 ಕುಟುಂಬಗಳ 77,793 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಮಂಡಳಿ (ಎನ್‌ಡಿಆರ್‌ಆರ್‌ಎಂಸಿ) ವಕ್ತಾರ ಮಾರ್ಕ್ ಟಿಂಬಾಲ್ ಹೇಳಿದ್ದಾರೆ.
ಮೊದಲು ಮೊಲೇವ್ ಚಂಡಮಾರುತವು ಭಾನುವಾರ ಸಂಜೆ ಫಿಲಿಪ್ಪೀನ್ಸ್ನ ರಾಜಧಾನಿಯಾದ ಮನಿಲಾದ ದಕ್ಷಿಣ ಭಾಗದ ತಬಾಕೊ ನಗರಕ್ಕೆ ಅಪ್ಪಳಿಸಿದ್ದು, ಸದ್ಯ ತಣ್ಣಗಾಗಿದೆ.
ಕೋವಿಡ್ ಸಾಂಕ್ರಾಮಿಕದ ನಡುವೆ ಈ ವರ್ಷ ಫಿಲಿಪ್ಪೀನ್ಸ್ನಲ್ಲಿ ಉಂಟಾದ 17ನೇ ಚಂಡಮಾರುತ ಇದಾಗಿದೆ.