ETV Bharat / international

ಮೋದಿ ಭೇಟಿ ವಿರೋಧಿಸಿ ಬಾಂಗ್ಲಾದಲ್ಲಿ ಗಲಭೆ: 26 ಪೊಲೀಸರಿಗೆ ಗಾಯ - ಢಾಕಾ ಸುದ್ದಿ

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾ ಭೇಟಿಯನ್ನು ವಿರೋಧಿಸಿ ಬಾಂಗ್ಲಾದಲ್ಲಿ ಮೂಲಭೂತವಾದಿ ಇಸ್ಲಾಮಿಸ್ಟ್ ಗುಂಪು ಹಿಫಾಜತ್-ಎ-ಇಸ್ಲಾಂನ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ.

Bangladesh violence
ಹೆಫಜತ್-ಎ-ಇಸ್ಲಾಂ ಕಾರ್ಯಕರ್ತರಿಂದ ದಾಳಿ
author img

By

Published : Mar 28, 2021, 9:53 AM IST

ಢಾಕಾ: ಮೂಲಭೂತವಾದಿ ಇಸ್ಲಾಮಿಕ್ ಗುಂಪು ಹಿಫಾಜತ್-ಎ-ಇಸ್ಲಾಂನ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಬಾಂಗ್ಲಾದೇಶದಲ್ಲಿ ಕನಿಷ್ಠ 26 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಶನಿವಾರದಂದು ಬ್ರಹ್ಮನ್‌ಪುರಿಯ ಸರೈಲ್ ಉಪಜಿಲ್ಲೆಯಲ್ಲಿರುವ ಅರುಯಿಲ್ ಪೊಲೀಸ್ ಶಿಬಿರವನ್ನು ಗುರಿಯಾಗಿಸಿಕೊಂಡು ಕಿರಾತಕರು ದಾಳಿ ನಡೆಸಿದ್ದಾರೆ. ಅಲ್ಲದೆ, ಫರೀದ್‌ಪುರ ಜಿಲ್ಲೆಯ ಭಂಗಾದಲ್ಲಿರುವ ಪೊಲೀಸ್ ಠಾಣೆಯಲ್ಲಿ ಆರು ಪೊಲೀಸರ ಮೇಲೆ ಉಗ್ರರು ಹಲ್ಲೆ ನಡೆಸಿದ್ದಾರೆ.

ಭಾರತ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ವಿರುದ್ಧ ರಾಜಧಾನಿ ಢಾಕಾ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ನಡೆದ ಪ್ರತಿಭಟನೆಯಿಂದ ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

ಇದನ್ನು ಓದಿ: 2 ದಿನದ ಬಾಂಗ್ಲಾ ಪ್ರವಾಸ ಮುಗಿಸಿ ದೆಹಲಿಗೆ ಬಂದಿಳಿದ ಪ್ರಧಾನಿ ಮೋದಿ

ಜೆಎಂಬಿಯ ಹಿಫಾಜತ್ ಉಗ್ರರ ನೇತೃತ್ವದಲ್ಲಿ ಚಿತ್ತಗಾಂಗ್‌ನಲ್ಲಿ ಸಾವಿರಾರು ಇಸ್ಲಾಮಿಸ್ಟ್‌ಗಳು ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆಯ ನಂತರ ಢಾಕಾ, ಚಟ್ಟೋಗ್ರಾಮ್, ಬ್ರಹ್ಮನ್‌ಬರಿಯಾ ಮತ್ತು ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೂ ಮುಂಚಿತವಾಗಿ ಪಾಲ್ಟನ್, ಗುಲಿಸ್ತಾನ್ ಮತ್ತು ಬೈತುಲ್ ಮುಕಾರಮ್ ಮಸೀದಿ ಪ್ರದೇಶಗಳಲ್ಲಿ ಪೊಲೀಸರು ಮತ್ತು ಬಿಜಿಬಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಆದರೆ ಮಧ್ಯಾಹ್ನ 3.30 ರ ಸುಮಾರಿಗೆ ಅರುಯಿಲ್ ಪೊಲೀಸ್ ಕ್ಯಾಂಪ್ ಮೇಲೆ ದಾಳಿ ನಡೆಸಲಾಗಿದೆ. ಗಾಯಗೊಂಡ ಪೊಲೀಸರಲ್ಲಿ ಸರೈಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕಬೀರ್ ಹೊಸೈನ್ ಕೂಡ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.