ವಾಷಿಂಗ್ಟನ್: ಅಫ್ಘಾನಿಸ್ತಾದಲ್ಲಿ ಅಧಿಕೃತವಾಗಿ ಆಡಳಿತಕ್ಕೆ ಬರಲು ಸಿದ್ಧತೆಗಳನ್ನು ಮಾಡಿಕೊಂಡಿರುವ ತಾಲಿಬಾನ್ ಜಗತ್ತಿನ ಎದುರು ಮನ್ನಣೆ ಪಡೆಯಲು ಏನು ಮಾಡಬೇಕು ಎಂಬುದನ್ನು ನಿರೀಕ್ಷಿಸುತ್ತಾರೋ ಆ ವಿಚಾರದಲ್ಲಿ ವಿಶ್ವವು ಒಗ್ಗಟ್ಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರ ಪರ ನಿಲ್ಲಬೇಕು ಎಂಬುದನ್ನು ಚೀನಾದ ನಿರ್ಧಾರ ಮೇಲೆ ಅವಲಂಬಿಸಬೇಕಿಲ್ಲ ಎಂದು ಅಮೆರಿಕ ಹೇಳಿದೆ.
ಏನು ಮಾಡಬೇಕೆಂದು ತಾಲಿಬಾನ್ ನಿರೀಕ್ಷಿಸುತ್ತದೆಯೋ ಆ ವಿಚಾರದಲ್ಲಿ ವಿಶ್ವವು ಒಂದಾಗಿದೆ. ಅಫ್ಘಾನಿಸ್ತಾನವನ್ನು ತೊರೆಯಲು ಬಯಸುವ ಜನರಿಗೆ ಅಲ್ಲಿಂದ ನಿರ್ಗಮಿಸಲು ಅನುವು ಮಾಡಿಕೊಡಬೇಕು. ಇದರಲ್ಲಿ ಚೀನಾದ ಶ್ರಮ ಏನು ಎಂಬದನ್ನು ತಿಳಿಸಲಿ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ.
ಅಮೆರಿಕ ಸೇನೆ ಇನ್ನೂ ಹಲವು ವರ್ಷಗಳ ಕಾಲ ಅಫ್ಘಾನ್‌ನಲ್ಲೇ ಇರಬೇಕಿತ್ತು ಎಂದು ಚೀನಾ ರಷ್ಯಾ ಹೇಳುತ್ತವೆ. ಆದರೆ, ನಾವ್ಯಾಕೆ ಆಫ್ಘನ್ ತೊರೆದೆವು ಎಂಬ ಬಗ್ಗೆ ಈಗಾಗಲೇ ಅಧ್ಯಕ್ಷ ಜೋ ಬೈಡನ್ ವಿವರಿಸಿದ್ದಾರೆ ಎಂದು ಸಾಕಿ ಹೇಳಿದ್ದಾರೆ.
ವಿಶ್ವದಾದ್ಯಂತ 100 ದೇಶಗಳ ಒಕ್ಕೂಟದೊಂದಿಗೆ ಅಮೆರಿಕ ಕೆಲಸ ಮಾಡುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಯೊಂದಿಗೆ ತಾವು ಕೆಲಸ ಮಾಡುತ್ತಿದ್ದೇವೆ ಎಂದರು. ಇದೇ ವೇಳೆ ತಾಲಿಬಾನ್ ಮೇಲೆ ನಿರ್ಬಂಧಗಳನ್ನು ವಿಧಿಸುವ ವಿಚಾರದ ಬಗೆಗಿನ ಮಾತುಗಳನ್ನು ಸಾಕಿ ತಳ್ಳಿಹಾಕಿದರು. ನಾವು ಪ್ರಸ್ತುತ ತಾಲಿಬಾನ್ ಮೇಲಿನ ನಿರ್ಬಂಧಗಳನ್ನು ಸರಾಗಗೊಳಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಯಾರೂ ನಿರ್ಣಯಿಸಬಾರದು ಎಂದಿದ್ದಾರೆ ಸಾಕಿ.
ಇದನ್ನೂ ಓದಿ: ಔಪಚಾರಿಕವಾಗಿ ತಾಲಿಬಾನಿಗಳನ್ನು ಅಮೆರಿಕ ಗುರುತಿಸುವುದಿಲ್ಲ: ಸೆನೆಟರ್ ಕ್ರಿಸ್ ಮರ್ಫಿ