ನ್ಯೂಯಾರ್ಕ್: ದೇಶ ವಿದೇಶಗಳಿಗೆ ಭೀತಿ ಹುಟ್ಟಿಸಿರುವ ಚೀನಾದ ಡೆಡ್ಲಿ ಕೊರೊನಾ ವೈರಸ್ ಈಗಾಗಲೇ ಭಾರತಕ್ಕೂ ಲಗ್ಗೆ ಹಾಕಿದ್ದು, ಮೂವರ ಪ್ರಾಣ ಬಲಿ ಪಡೆದುಕೊಂಡಿದೆ. ಇದರ ಮಧ್ಯೆ ಕೂಡ ಆಯಾ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಇದರ ತಡೆಗೆ ಮಹತ್ವದ ಕ್ರಮ ಕೈಗೊಂಡಿವೆ.
ಕೊರೊನಾ ಭೀತಿಯಿಂದಾಗಿ ಭಾರತ ಅಕ್ಷರಶ: ಸ್ತಬ್ದವಾಗಿದ್ದು, ಮಾಲ್,ಥಿಯೇಟರ್, ಅದ್ಧೂರಿ ಮದುವೆ ಸಮಾರಂಭ,ದೇವಸ್ಥಾನ, ಪಾರ್ಕ್ ಸೇರಿದಂತೆ ಪ್ರಮುಖ ಸ್ಥಳಗಳನ್ನ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಇತರೆ ದೇಶಗಳಿಗೆ ಹೋಲಿಕೆ ಮಾಡಿದಾಗ ಕೊರೊನಾ ನಿಯಂತ್ರಣದಲ್ಲಿ ಮಹತ್ವದ ಕ್ರಮ ಕೈಗೊಂಡಿದ್ದು, ಈ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ(WHO) ಮೆಚ್ಚುಗೆ ವ್ಯಕ್ತಪಡಿಸಿದೆ. ಚೀನಾ ನಂತರ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕಡಿಮೆ ಪ್ರಕರಣಗಳು ಕಂಡು ಬಂದಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಅತಿ ಹೆಚ್ಚಿನ ಜನಸಂಖ್ಯೆ ಇರುವ ಚೀನಾದಲ್ಲಿ ಸಾವಿನ ಸಂಖ್ಯೆ 3 ಸಾವಿರ ಗಡಿ ದಾಟಿದೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಭಾರತದ ಬೆನ್ನು ತಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳನ್ನ ಚಾಚು ತಪ್ಪದೇ ಭಾರತ ಪಾಲನೆ ಮಾಡುತ್ತಿರುವುದರಿಂದ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡುತ್ತಿಲ್ಲ. 139 ಸೋಂಕಿತರ ಸಂಖ್ಯೆ ಇದೆ.