ETV Bharat / international

ಶ್ವೇತಭವನ‌ ಕೊರೊನಾ ವೈರಸ್ ಕಾರ್ಯಪಡೆಯ ಮೂವರು ಸದಸ್ಯರಿಗೆ ಕ್ವಾರಂಟೈನ್ - ಡಾ. ಆಂಥೋನಿ ಫೌಸಿ

ಡಾ. ಅಂಥೋನಿ ಫೌಸಿ ಸೇರಿದಂತೆ ಶ್ವೇತಭವನದ ಕೊರೊನಾ ವೈರಸ್​ ಕಾರ್ಯಪಡೆಯ ಮೂವರು ಸದಸ್ಯರು ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

3 members of White House virus task force in quarantine
ಕ್ವಾರಂಟೈನ್​ಗೆ ಒಳಗಾದ ವೈಟ್ ಹೌಸ್​ನ ಕೊರೊನಾ ವೈರಸ್ ಕಾರ್ಯಪಡೆಯ 3 ಸದಸ್ಯರು
author img

By

Published : May 10, 2020, 10:40 AM IST

ವಾಷಿಂಗ್ಟನ್ : ಅಮೆರಿಕದ ಹಿರಿಯ ವಿಜ್ಞಾನಿ ಡಾ. ಅಂಥೋನಿ ಫೌಸಿ ಸೇರಿದಂತೆ ಶ್ವೇತಭವನದ ಕೊರೊನಾ ವೈರಸ್​ ಟಾಸ್ಕ್ ಫೋರ್ಸ್‌ನ ಮೂವರು ಸದಸ್ಯರು ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಕೋವಿಡ್-19 ಪಾಸಿಟಿವ್​ ಬಂದ ವ್ಯಕ್ತಿಯೊಂದಿಗೆ ಸಂಪರ್ಕ ಇರಿಸಿಕೊಂಡಿದ್ದರಿಂದ ಈ ಮೂವರು ಸೆಲ್ಫ್‌​ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ನಿರ್ದೇಶಕ ಮತ್ತು ಕಾರ್ಯಪಡೆಯ ಪ್ರಮುಖ ಸದಸ್ಯರಾದ ಫೌಸಿ, ಕೊರೊನಾದ ಬಗ್ಗೆ ಸಾರ್ವಜನಿಕರಿಗೆ ಸರಳ ಮತ್ತು ನೇರವಾಗಿ ವಿವರಣೆ ನೀಡುವಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಇನ್ನು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ನಿರ್ದೇಶಕ ಡಾ. ರಾಬರ್ಟ್ ರೆಡ್‌ಫೀಲ್ಡ್ ಮತ್ತು ಆಹಾರ ಮತ್ತು ಔಷಧ ಆಡಳಿತದ ಆಯುಕ್ತ ಸ್ಟೀಫನ್ ಹಾನ್ ಕೂಡ ಕೂಡ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಫೌಸಿಯವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ಪರೀಕ್ಷಾ ವರದಿ ನೆಗೆಟಿವ್ ಎಂದು​ ಬಂದಿದೆ. ಆದರೂ ಮುನ್ನೆಚ್ಚರಿಕಾ ಕ್ರಮದ ಹಿನ್ನೆಲೆ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಮನೆಯಲ್ಲಿಯೇ ಇದ್ದು ತನ್ನ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿ ಅವರನ್ನು ಶುಕ್ರವಾರ ಪರೀಕ್ಷಿಸಲಾಗಿ ಇವರಿಗೆ ಕೊರೊನಾ ಪಾಸಿಟಿವ್​ ಬಂದಿತ್ತು. ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಗಳಲ್ಲಿ ಶ್ವೇತಭವನದ ಸಂಕೀರ್ಣದಲ್ಲಿ ಕೆಲಸ ಮಾಡುವ ಎರಡನೇ ವ್ಯಕ್ತಿ ಇವರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.