ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವ ಮೂಲಕ ಉಕ್ರೇನ್‌ನಲ್ಲಿ ಯುದ್ಧ ಕೊನೆಗೊಳಿಸುವಂತೆ ರಷ್ಯನ್ನರಿಗೆ ಕರೆ ನೀಡುವ ಮೂಲಕ ದಕ್ಷಿಣ ಕೆರೊಲಿನಾ ಸೆನೆಟರ್ ಲಿಂಡ್ಸೆ ಗ್ರಹಾಂ ವಿವಾದ ಸೃಷ್ಟಿಸಿದ್ದಾರೆ. ಲಿಂಡ್ಸೆ ಗ್ರಹಾಂ ಹೇಳಿಕೆ ಬಗ್ಗೆ ಅಮೆರಿಕ ಸರ್ಕಾರ ಸ್ಪಷ್ಟನೆ ನೀಡಿದ್ದು, ಇದು ಸರ್ಕಾರದ ನಿಲುವಲ್ಲ ಎಂದು ವೈಟ್‌ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದ್ದಾರೆ.
ವಾಯುಪಡೆಯ ಮಾಜಿ ವಕೀಲರೂ ಆಗಿರುವ ಗ್ರಹಾಂ ಗುರುವಾರ ಸಂಜೆ ಟ್ವೀಟ್ ಮಾಡಿ, ಯುದ್ಧವನ್ನು ಕೊನೆಗೊಳಿಸುವ ಏಕೈಕ ಮಾರ್ಗವೆಂದರೆ ರಷ್ಯಾದಲ್ಲಿ ಯಾರಾದರೂ ಈ ವ್ಯಕ್ತಿಯನ್ನು ಹೊರಗೆ ಕರೆದೊಯ್ಯುವುದು. ಇದರಿಂದ ನೀವು ನಿಮ್ಮ ದೇಶ ಮತ್ತು ಜಗತ್ತಿಗೆ ಉತ್ತಮ ಸೇವೆ ಮಾಡಿದಂತೆ ಎಂದು ಬರೆದಿದ್ದರು.
-
Is there a Brutus in Russia? Is there a more successful Colonel Stauffenberg in the Russian military?
— Lindsey Graham (@LindseyGrahamSC) March 4, 2022 " class="align-text-top noRightClick twitterSection" data="
The only way this ends is for somebody in Russia to take this guy out.
You would be doing your country - and the world - a great service.
">Is there a Brutus in Russia? Is there a more successful Colonel Stauffenberg in the Russian military?
— Lindsey Graham (@LindseyGrahamSC) March 4, 2022
The only way this ends is for somebody in Russia to take this guy out.
You would be doing your country - and the world - a great service.Is there a Brutus in Russia? Is there a more successful Colonel Stauffenberg in the Russian military?
— Lindsey Graham (@LindseyGrahamSC) March 4, 2022
The only way this ends is for somebody in Russia to take this guy out.
You would be doing your country - and the world - a great service.
ಈ ಟ್ವೀಟ್‌ಗೆ ಕಾಂಗ್ರೆಸ್‌ನ ಕೆಲವು ಸದಸ್ಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಟೆಕ್ಸಾಸ್ ರಿಪಬ್ಲಿಕನ್ ಸೆನೆಟರ್ ಟೆಡ್ ಕ್ರೂಜ್ ಇದನ್ನು ಅಸಾಧಾರಣವಾದ ಕೆಟ್ಟ ಕಲ್ಪನೆ ಎಂದು ಕರೆದಿದ್ದಾರೆ. ರಿಪಬ್ಲಿಕ್‌ನ ಜಾರ್ಜಿಯಾ ಪ್ರತಿನಿಧಿ ಮಾರ್ಜೋರಿ ಟೇಲರ್ ಗ್ರೀನ್, ಗ್ರಹಾಂ ಅವರ ಹೇಳಿಕೆ ಖಂಡಿಸಿದ್ದು, ಇದು ಅತ್ಯಂತ ಬೇಜವಾಬ್ದಾರಿ ಟ್ವೀಟ್ ಹಾಗೂ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪುಟಿನ್ ಬಂಧಿಸುವ ರಷ್ಯಾ ಅಧಿಕಾರಿಗಳಿಗೆ ₹7.5 ಕೋಟಿ ಬಹುಮಾನ ಘೋಷಿಸಿದ ಉದ್ಯಮಿ