ವಾಷಿಂಗ್ಟನ್ : ನಾವು ಗೆಲ್ಲುವ ವಿಶ್ವಾಸವಿದೆ ಎಂದು ಯುಎಸ್ ಚುನಾವಣೆಯ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಹೇಳಿದ್ದಾರೆ.
ಪ್ರತೀ ಮತ ಎಣಿಸಿ ಮುಗಿಯುವವರೆಗೂ ನಾವು ತಾಳ್ಮೆಯಿಂದ ಕಾಯುತ್ತೇವೆ. ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿತ್ತು. ಮತ ಎಣಿಕೆ ಮುಗಿಯುವಾಗ ನಾಳೆ ಬೆಳಗ್ಗೆ ಆಗಬಹುದು ಅಥವಾ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ವಿಲ್ಮಿಂಗ್ಟನ್‌ನ ಡೆಲವೇರ್ನಲ್ಲಿ ಅವರು ಹೇಳಿದರು.
ಎಲ್ಲಾ ಮತಗಳ ಎಣಿಸಿ ಮುಗಿಯವವರೆಗೂ ಚುನಾವಣೆ ಪ್ರಕ್ರಿಯೆ ಮುಗಿಯುವುದಿಲ್ಲ. ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಕಾಯುತ್ತೇವೆ ಎಂದು ಬೈಡೆನ್ ತಿಳಿಸಿದ್ದಾರೆ.