ವಾಷಿಂಗ್ಟನ್: ಯುಎಸ್ ಫಾರ್ಮಾಸ್ಯುಟಿಕಲ್ ಮತ್ತು ಮೆಡಿಕಲ್ ಡಿವೈಸ್ ಕಂಪನಿ ಜಾನ್ಸನ್ ಮತ್ತು ಜಾನ್ಸನ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಆರಂಭಿಕ ಪ್ರಯೋಗಗಳಲ್ಲಿ ಕೊರೊನಾ ವೈರಸ್ಗೆ ಒಂದೇ ಡೋಸ್ ಬಲವಾದ ರೋಗನಿರೋಧಕ ಪ್ರತಿಕ್ರಿಯೆ ತೋರಿಸಿದೆ ಎಂದು ಮೆಡ್ರಾಕ್ಸಿವ್ ಎಂಬ ವೈದ್ಯಕೀಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮಧ್ಯಂತರ ವರದಿಯು ಬಹಿರಂಗಪಡಿಸಿದೆ.
Ad26.COV2.Sನ ಒಂದು ಡೋಸ್ ಬಹುಪಾಲು ಲಸಿಕೆ ಸ್ವೀಕರಿಸುವವರಲ್ಲಿ ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ತೋರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಾನ್ಸನ್ ಮತ್ತು ಜಾನ್ಸನ್ ಲಸಿಕೆ ಅಮೆರಿಕಾದಲ್ಲಿ ಕ್ಲಿನಿಕಲ್ ಪ್ರಯೋಗಗಳ ಅಂತಿಮ ಹಂತಕ್ಕೆ ಪ್ರವೇಶಿಸಿದ ನಾಲ್ಕನೇ ಲಸಿಕೆಯಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷದ ಅಂತ್ಯದ ವೇಳೆಗೆ 100 ಮಿಲಿಯನ್ ಡೋಸ್ ಲಸಿಕೆಯನ್ನು ಅಮೆರಿಕಾದಾದ್ಯಂತ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ನವೆಂಬರ್ 3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಲಸಿಕೆ ವಿತರಣೆಗೆ ಲಭ್ಯವಿರಬಹುದು ಎಂದು ಟ್ರಂಪ್ ಹೇಳಿದ್ದಾರೆ.
ಚುನಾವಣೆಗೆ ಮುಂಚಿತವಾಗಿ ಲಸಿಕೆ ಅನುಮೋದನೆ ಪ್ರಕ್ರಿಯೆಯನ್ನು ತಲುಪಿಸಲು ಟ್ರಂಪ್ ವೇಗವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅನೇಕ ಡೆಮೋಕ್ರಾಟ್‌ಗಳು ಆರೋಪಿಸಿದ್ದಾರೆ.