ETV Bharat / international

ಯುಎಸ್​​ 'ಭಯೋತ್ಪಾದನೆ 2020' ವರದಿಯಲ್ಲಿ ಪಾಕ್​ನ ನರಿಬುದ್ದಿ ಉಲ್ಲೇಖ - ಯುಎಸ್​ ಸ್ಟೇಟ್​ ಡಿಪಾರ್ಟ್ಮೆಂಟ್​​​

ಆಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡ ಗುಂಪುಗಳು, ಆಫ್ಘನ್ ತಾಲಿಬಾನ್ ಮತ್ತು ಅಂಗಸಂಸ್ಥೆ ಹಕ್ಕಾನಿ ನೆಟ್‌ವರ್ಕ್ ಹಾಗೆಯೇ ಭಾರತವನ್ನು ಗುರಿಯಾಗಿಸಿವೆ. ಎಲ್‌ಇಟಿ ಮತ್ತು ಅದರ ಅಂಗಸಂಸ್ಥೆ ಫ್ರಂಟ್​​ ಆರ್ಗನೈಜೇಷನ್​​ ಹಾಗೂ ಜೆಎಂ ಪಾಕಿಸ್ತಾನದ ಭೂಪ್ರದೇಶದಿಂದ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ..

us-state-dept-nails-pak-as-terror-sponsor
ಯುಎಸ್
author img

By

Published : Dec 17, 2021, 9:55 AM IST

ನವದೆಹಲಿ : ಯುಎಸ್​ ಸ್ಟೇಟ್​ ಡಿಪಾರ್ಟ್ಮೆಂಟ್​​​ 'ಭಯೋತ್ಪಾದನೆ 2020' ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ವಿಷಕಾರಿ ರಾಷ್ಟ್ರ ಪಾಕಿಸ್ತಾನ ಭಯೋತ್ಪಾದನೆಯಲ್ಲಿ ತನ್ನ ಸೀಮಿತ ಪ್ರಗತಿ ಸಾಧಿಸಿದೆ ಎಂದು ತಿಳಿಸಿದೆ.

ಅಲ್ಲದೆ, ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಸ್ಥಾಪಕ ಮಸೂದ್ ಅಜರ್ ಮತ್ತು 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಾಜಿದ್ ಮಿರ್‌ನಂತಹ ಭಯೋತ್ಪಾದಕ ನಾಯಕರನ್ನು ವಿಚಾರಣೆಗೆ ಒಳಪಡಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದೆ.

ಅಲ್ಲದೆ, ಆಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡ ಗುಂಪುಗಳು, ಆಫ್ಘನ್ ತಾಲಿಬಾನ್ ಮತ್ತು ಅಂಗಸಂಸ್ಥೆ ಹಕ್ಕಾನಿ ನೆಟ್‌ವರ್ಕ್ ಹಾಗೆಯೇ ಭಾರತವನ್ನು ಗುರಿಯಾಗಿಸಿವೆ. ಎಲ್‌ಇಟಿ ಮತ್ತು ಅದರ ಅಂಗಸಂಸ್ಥೆ ಫ್ರಂಟ್​​ ಆರ್ಗನೈಜೇಷನ್​​ ಹಾಗೂ ಜೆಎಂ ಪಾಕಿಸ್ತಾನದ ಭೂಪ್ರದೇಶದಿಂದ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪಾಕಿಸ್ತಾನವು 2020ರಲ್ಲಿ ತನ್ನ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಕ್ರಿಯಾ ಯೋಜನೆಯನ್ನು ಪೂರ್ಣಗೊಳಿಸುವ ಮೂಲಕ ಹೆಚ್ಚುವರಿ ಪ್ರಗತಿಯನ್ನು ಸಾಧಿಸಿದೆ. ಆದರೆ, ಎಫ್‌ಎಟಿಎಫ್ 'ಗ್ರೇ ಲಿಸ್ಟ್' ಅನ್ನು ಪೂರ್ಣಗೊಳಿಸಲಿಲ್ಲ. ಸರ್ಕಾರ ಮತ್ತು ಮಿಲಿಟರಿ ಪಡೆ ಭಯೋತ್ಪಾದಕತೆಗೆ ಸಹಕಾರ ನೀಡುವ ರೀತಿ ವರ್ತಿಸುತ್ತಿದೆ. ಭಯೋತ್ಪಾದನೆ ಅಳಿವಿಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.