ವಾಷಿಂಗ್ಟನ್: ಟೆಹ್ರಾನ್ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಉಕ್ರೇನ್ ವಿಮಾನ ಪತನಗೊಂಡು 176 ಜನರು ಸಾವನ್ನಪ್ಪಿದ್ದರು. 'ಇದು ಇರಾನ್ ಕೃತ್ಯ'ವೆಂದು ಅಮೆರಿಕ ದೂರಿದೆ.
ಟೆಹ್ರಾನ್ನಲ್ಲಿ ಪತನಗೊಂಡ ಉಕ್ರೇನ್ ವಿಮಾನವನ್ನು ಇರಾನ್ ಕ್ಷಿಪಣಿ ಹೊಡೆದುರುಳಿಸಿದೆ. ಇರಾನ್ ತನ್ನ ಗುರಿ ತಪ್ಪಿ ಪ್ರಯಾಣಿಕ ವಿಮಾನ ಹೊಡೆದುರುಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರವಾದ ಆಪಾದನೆ ಮಾಡಿದ್ದಾರೆ.
-
The US believes that the Ukraine airliner that crashed and killed 176 people was accidentally brought down by Iran. The Pentagon declined to comment: Reuters
— ANI (@ANI) January 9, 2020 " class="align-text-top noRightClick twitterSection" data="
">The US believes that the Ukraine airliner that crashed and killed 176 people was accidentally brought down by Iran. The Pentagon declined to comment: Reuters
— ANI (@ANI) January 9, 2020The US believes that the Ukraine airliner that crashed and killed 176 people was accidentally brought down by Iran. The Pentagon declined to comment: Reuters
— ANI (@ANI) January 9, 2020
ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಈ ವೇಳೆ ಇರಾನ್ನ ಒಂದು ಕ್ಷಿಪಣಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದೆ ಎಂದು ಆಪಾದಿಸಿದೆ. ಅಮೆರಿಕದ ಈ ಆರೋಪವನ್ನು ಇರಾನ್ ತಳ್ಳಿ ಹಾಕಿದ್ದು, 'ವಿಮಾನ ಪತನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದೆ.
ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಿಗ್ಗೆ ಬೋಯಿಂಗ್ 737-800 ವಿಮಾನ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲ 176 ಜನರು ಮೃತಪಟ್ಟಿದ್ದರು.