ವಾಷಿಂಗ್ಟನ್: ಕೊರೊನಾ ಬಿಕ್ಕಟ್ಟಿನಿಂದ ನಲುಗುತ್ತಿರುವ ಭಾರತಕ್ಕೆ ಅಮೆರಿಕ ಸರ್ಕಾರ ಹೆಚ್ಚಿನ ಕೊರೊನಾ ಲಸಿಕೆಗಳನ್ನು ನೀಡುವ ಮೂಲಕ ನೆರವಾಗಬೇಕು ಎಂದು ಜೋ ಬೈಡನ್ಗೆ ಹಲವಾರು ಶಾಸಕರು ಮತ್ತು ಗವರ್ನರ್ಗಳು ಒತ್ತಾಯಿಸಿದ್ದಾರೆ.
ಭಾರತದಲ್ಲಿ ಭಾನುವಾರ 1,14,460 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿ ಯಾಗಿದ್ದು, ಈವರೆಗೆ ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 2,88,09,339 ಕ್ಕೆ ಏರಿಕೆಯಾಗಿದೆ.
"ಭಾರತದಲ್ಲಿ ಎದುರಾಗಿರುವ ಆರೋಗ್ಯ ಬಿಕ್ಕಟ್ಟು ವಿನಾಶಕಾರಿಯಾಗಿದೆ ಮತ್ತು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರಿಂದ ಹೆಚ್ಚಿನ ಸಹಾಯವನ್ನು ಕೋರಿದೆ. ನಮ್ಮ ಪ್ರಮುಖ ಜಾಗತಿಕ ಮಿತ್ರರಾಷ್ಟ್ರಗಳಲ್ಲಿ ಒಂದಾದ ಭಾರತ, ಈ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡಲು ಹೆಚ್ಚಿನ ಕೋವಿಡ್ ಲಸಿಕೆಗಳು ಮತ್ತು ವೈದ್ಯಕೀಯ ಸರಬರಾಜು ಅಗತ್ಯವಿದೆ" ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಹೇಳಿದ್ದಾರೆ. ಭಾರತಕ್ಕಾಗಿ ಪ್ರಾರ್ಥಿಸುವಂತೆ ಇವರು ಯುಎಸ್ ನಾಗರಿಕರನ್ನು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
"ಭಾರತವು ಅಮೆರಿಕದ ನಿರ್ಣಾಯಕ ಸ್ನೇಹಿತ ರಾಷ್ಟ್ರ. ಬೈಡನ್ ಅವರ ಲಸಿಕೆ ಹಂಚಿಕೆ ಕಾರ್ಯಕ್ರಮವು ದೋಷಪೂರಿತವಾಗಿದೆ. ಲಸಿಕೆ ನೀಡುವಾಗ ನಾವು ಭಾರತದಂತಹ ನಮ್ಮ ಮಿತ್ರರಾಷ್ಟ್ರಗಳಿಗೆ ಆದ್ಯತೆ ನೀಡಬೇಕು ಮತ್ತು ಅದು ತಮಗೆ ಅಗತ್ಯವಾದ ಲಸಿಕೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ರಿಪಬ್ಲಿಕನ್ ಸೆನೆಟರ್ ಒಬ್ಬರು ಹೇಳಿದರು.
ಕೊರೊನಾ ವೈರಸ್ ಅನ್ನು ಸೋಲಿಸಲು ಇತರ ರಾಷ್ಟ್ರಗಳಿಗೆ ಸಹಾಯ ಮಾಡುವುದನ್ನು ಯುಎಸ್ ಮುಂದುವರಿಸುವುದು ಮುಖ್ಯ ಎಂದು ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಸೆನೆಟರ್ ರೋಜರ್ ವಿಕರ್ ಹೇಳಿದರು. ಸಹಾಯದ ಅಗತ್ಯವಿರುವ ದೇಶಗಳಿಗೆ ಸಹಾಯ ಮಾಡಲು ತೆಗೆದುಕೊಂಡ ಕ್ರಮಗಳಿಗಾಗಿ ಕಾಂಗ್ರೆಸ್ ಸದಸ್ಯ ಆ್ಯಡಂ ಸ್ಮಿತ್ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಶ್ಲಾಘಿಸಿದರು. "ನಮ್ಮ ಸಮುದಾಯ ಮತ್ತು ಭಾರತೀಯ-ಅಮೇರಿಕನ್ ವಲಸೆಗಾರರ" ನಡುವಿನ ನಿಕಟ ಸಂಬಂಧವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ನಮ್ಮ ಹತ್ತಿರದ ಮಿತ್ರ ರಾಷ್ಟ್ರಗಳಲ್ಲಿ ಒಂದಾದ ಭಾರತದ ಪರಿಸ್ಥಿತಿ ಭೀಕರವಾಗಿದೆ. ಅಗತ್ಯವಿರುವ ಸಮಯದಲ್ಲಿ ಭಾರತಕ್ಕೆ ಲಸಿಕೆಗಳನ್ನು ನೀಡುವಂತೆ ನಾನು ಬೈಡನ್ ಆಡಳಿತವನ್ನು ಪ್ರೋತ್ಸಾಹಿಸುತ್ತೇನೆ ಎಂದು ಹೌಸ್ ಫೈನಾನ್ಷಿಯಲ್ ಸರ್ವೀಸಸ್ ಕಮಿಟಿಯ ಸದಸ್ಯರಾಗಿರುವ ಹಿಲ್ ಹೇಳಿದ್ದಾರೆ.