ವಾಷಿಂಗ್ಟನ್( ಅಮೆರಿಕ): ಉತ್ತರ ಕೊರಿಯಾದ ಅಣ್ವಸ್ತ್ರವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಸಹಕಾರವನ್ನು ನೀಡಲು ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಒಪ್ಪಿಕೊಂಡಿದ್ದಾರೆ ಎಂದು ಮೂವರು ಅಧಿಕಾರಿಗಳು ಶ್ವೇತಭವನಲ್ಲಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರರು ಉತ್ತರ ಕೊರಿಯಾದ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಬಗ್ಗೆ ತಮ್ಮ ಕಳವಳ ಹಂಚಿಕೊಂಡಿದ್ದು, ಅಣ್ವಸ್ತ್ರೀಕರಣದ ಬಗ್ಗೆ ಏಕೀಕೃತ ತ್ರಿಪಕ್ಷೀಯ ಸಹಕಾರದ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದ್ದೇವೆ ಎಂದು ಪುನರುಚ್ಚರಿಸಿದ್ದಾರೆ.
ಓದಿ: ಪಂಚರಾಜ್ಯ ಕದನ: ಅಸ್ಸೋಂನಲ್ಲಿ ಬಿಜೆಪಿಗಿದೆ ಕಠಿಣ ಸವಾಲು
ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಜಪಾನಿನ ರಾಷ್ಟ್ರೀಯ ಭದ್ರತಾ ಸಚಿವಾಲಯದ ಮುಖ್ಯಸ್ಥ ಜನರಲ್ ಶಿಗೇರು ಕಿಟಮುರಾ ಮತ್ತು ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಕಚೇರಿ ನಿರ್ದೇಶಕ ಸುಹ್ ಹೂನ್ ವಾಷಿಂಗ್ಟನ್‌ನಲ್ಲಿ ಭೇಟಿಯಾಗಿದ್ದರು.