ವಾಷಿಂಗ್ಟನ್: ಬೈಡನ್ ಸರ್ಕಾರ ಯುಎಸ್ ಕಾರ್ಮಿಕರ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶ ಜಾರಿಗೆ ತರಲಾದ ಹೆಚ್ -1 ಬಿ ವೀಸಾ ಆಯ್ಕೆ ಪ್ರಕ್ರಿಯೆಯನ್ನು ಯುಎಸ್ ಗ್ರೂಪ್ ವಿರೋಧಿಸಿದೆ.
ಗ್ರೀನ್ ಕಾರ್ಡ್ ವಿತರಣೆ ಹಾಗೂ ವಲಸೆ ನೀತಿಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಹೊರಡಿಸಿದ್ದ ಆದೇಶವನ್ನು ಅಧ್ಯಕ್ಷ ಜೋ ಬೈಡನ್ ರದ್ದು ಮಾಡಿ, ಹೊಸ ಹೆಚ್ -1 ಬಿ ವೀಸಾ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಅಮೆರಿಕದ ವ್ಯಾಪ್ತಿಯಲ್ಲಿ 2022ರ ವರ್ಷಕ್ಕೆ ಹೆಚ್-1ಬಿ ವೀಸಾಗೆ ಯುನೈಟೆಡ್ ಸ್ಟೇಟ್ಸ್ ಸಿಟಿಜನ್ಷಿಪ್ ಅಂಡ್ ಇಮಿಗ್ರೇಷನ್ ಸರ್ವೀಸಸ್ (ಯುಎಸ್ಸಿಐಎಸ್) ನಿಯಮಗಳಡಿ ಮಾರ್ಚ್ 25ರ ವರೆಗೆ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗಿದ್ದು, ಯುಎಸ್ ಗ್ರೂಪ್ ವಿರೋಧ ವ್ಯಕ್ತಪಡಿಸಿದೆ. ವಿವಿಧ ದೇಶಗಳ ಜನರು ವಲಸೆ ಬರುವುದರಿಂದ ಅಮೆರಿಕದ ಜನರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಜೊತೆಗೆ ಲಾಟರಿ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದು ಸೂಕ್ತವಲ್ಲ ಎಂದು ಬೈಡನ್ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಇನ್ನು ಹೆಚ್ -1 ಬಿ ವೀಸಾ ಆಯ್ಕೆ ಪ್ರಕ್ರಿಯೆ ಮಾರ್ಪಡಿಸುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಸಂಬಳ, ಉನ್ನತ - ನುರಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಉತ್ತೇಜನ ನೀಡುತ್ತದೆ. ಸಿಬ್ಬಂದಿ ಅಗತ್ಯಗಳನ್ನು ಪೂರೈಸಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರಲು ವ್ಯವಹಾರಗಳಿಗೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ ಎಂದು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು ತಿಳಿಸಿವೆ.