ETV Bharat / international

ಕೊರೊನಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಕುರಿತು ಎಫ್​ಡಿಎ ಎಚ್ಚರ - ಕೋವಿಡ್ -19

ಕೋವಿಡ್ -19ಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಕ್ಲೋರೊಕ್ವಿನ್ ಸುರಕ್ಷಿತ ಮತ್ತು ಪರಿಣಾಮಕಾರಿಯಲ್ಲ. ಬದಲಿಗೆ ಅದರ ಬಳಕೆಯಿಂದಾಗುವ ಅಪಾಯಗಳ ಬಗ್ಗೆ ತನಿಖೆ ಮುಂದುವರಿಸುವುದಾಗಿ ಎಫ್​ಡಿಎ ತಿಳಿಸಿದೆ.

US FDA warns against popping over-the-counter HCQ pills
ಕೋವಿಡ್ -19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಕುರಿತು ಎಫ್​ಡಿಎ ಎಚ್ಚರ
author img

By

Published : Apr 25, 2020, 2:34 PM IST

ವಾಷಿಂಗ್ಟನ್(ಅಮೆರಿಕ): ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಅನ್ನು 'ವಂಡರ್ ಡ್ರಗ್' ಎಂದು ಹೇಳಲಾಗುತ್ತಿರುವ ಸಮಯದಲ್ಲಿ, ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಶುಕ್ರವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಹೌದು, ಆಸ್ಪತ್ರೆಯ ಹೊರಗೆ ಅಥವಾ ಕ್ಲಿನಿಕಲ್ ಪ್ರಯೋಗಗಳಲ್ಲಿ ಕೋವಿಡ್ -19 ಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಕ್ಲೋರೊಕ್ವಿನ್ ಬಳಕೆ ಮಾಡಬೇಡಿ. ಏಕೆಂದ್ರೆ ಇದರಿಂದ ಹೃದಯ ಸಮಸ್ಯೆಗಳಾಗುವ ಅಪಾಯವಿದೆ ಎಂದು ತಿಳಿಸಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಕ್ಲೋರೊಕ್ವಿನ್‌ನೊಂದಿಗೆ ಚಿಕಿತ್ಸೆ ಪಡೆದ ಕೋವಿಡ್ -19 ರೋಗಿಗಳಲ್ಲಿ ಗಂಭೀರ ಹೃದಯದ ಲಯದ ಸಮಸ್ಯೆಗಳ ವರದಿಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಎಫ್​ಡಿಎ ತಿಳಿಸಿದೆ.

ಕೋವಿಡ್ -19ಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಕ್ಲೋರೊಕ್ವಿನ್ ಸುರಕ್ಷಿತ ಮತ್ತು ಪರಿಣಾಮಕಾರಿಯಲ್ಲ. ಬದಲಿಗೆ ಅದರ ಬಳಕೆಯಿಂದಾಗುವ ಅಪಾಯಗಳ ಬಗ್ಗೆ ತನಿಖೆ ಮುಂದುವರಿಸುವುದಾಗಿ ಎಫ್​ಡಿಎ ತಿಳಿಸಿದೆ.

ಇನ್ನೂ, ಆರೋಗ್ಯ ವೃತ್ತಿಪರರಿಂದ ಪ್ರಿಸ್ಕ್ರಿಪ್ಷನ್ ಇಲ್ಲದೇ ಆನ್‌ಲೈನ್ ಔಷಧಾಲಯಗಳಿಂದ ಈ ಔಷಧಗಳನ್ನು ಖರೀದಿಸಬೇಡಿ. ಆರೋಗ್ಯ ವೃತ್ತಿಪರರಿಂದ ಸೂಚಿಸದ ಯಾವುದೇ ರೀತಿಯ ಕ್ಲೋರೊಕ್ವಿನ್ ಅನ್ನು ಸಹ ತೆಗೆದುಕೊಳ್ಳಬಾರದು ಎಂದು ಎಫ್​ಡಿಎ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.