ಬ್ರೆಜಿಲಿಯಾ : ಎರಡು ನವಜಾತ ಶಿಶುಗಳಿಗೆ ಫೈಜರ್ ಲಸಿಕೆ ಕೊಟ್ಟು ನರ್ಸ್ ಎಡವಟ್ಟು ಮಾಡಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಕಾರಣ ಹಸುಳೆಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.
ಡಿಫ್ತೀರಿಯಾ (ಉಸಿರಾಟದ ಸಮಸ್ಯೆ), ಪೆರ್ಟುಸಿಸ್ (ನಾಯಿ ಕೆಮ್ಮು) ಹಾಗೂ ಹೆಪಟೈಟಿಸ್ ಬಿನಿಂದ ಬಳಲುತ್ತಿದ್ದ ಎರಡು ತಿಂಗಳ ಹೆಣ್ಣು ಮಗು ಮತ್ತು ನಾಲ್ಕು ತಿಂಗಳ ಗಂಡು ಮಗುವಿಗೆ ರೋಗನಿರೋಧಕ ಲಸಿಕೆ ನೀಡುವ ಬದಲಿಗೆ ನರ್ಸ್‌ವೊಬ್ಬರು ತಪ್ಪಾಗಿ ಕೋವಿಡ್ ವಿರುದ್ಧ ಹೋರಾಡುವ ಫೈಜರ್ ವ್ಯಾಕ್ಸಿನ್ ನೀಡಿದ್ದಾರೆ.
ಇದನ್ನೂ ಓದಿ: ಫೈಜರ್ ಲಸಿಕೆ ಕೋವಿಡ್ ವಿರುದ್ಧ 6 ತಿಂಗಳು ಅತ್ಯಂತ ಪರಿಣಾಮಕಾರಿ: ಅಧ್ಯಯನ
ಇದು ಶಿಶುಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಡವಟ್ಟು ಮಾಡಿದ ನರ್ಸ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಆರೋಗ್ಯ ಇಲಾಖೆಯ ಅನುಮತಿ ಮೇರೆಗೆ ಬ್ರೆಜಿಲ್ನಲ್ಲಿ 5 ರಿಂದ 12 ವರ್ಷದ ಮಕ್ಕಳಿಗೆ ಫೈಜರ್ ಲಸಿಕೆ ನೀಡಲಾಗುತ್ತಿದೆ.